ಬೆಂಗಳೂರು : ಸ್ಟಾರ್ಟ್ಅಪ್ ಕಂಪನಿ ಸಿಇಒ ಸುಚನಾ ಸೇಠ್ ತನ್ನ 4 ವರ್ಷದ ಮಗುವನ್ನೇ ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿ ಹೊತ್ತೋಯ್ದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿದೆ. 4 ವರ್ಷದ ಕಂದನ ಕೊಲ್ಲೋಕೆ ಸುಚನಾ ಮಾಡಿದ್ದೇನು ಗೊತ್ತಾ..?
ಸುಚನಾ ಉಳಿದಿದ್ದ ರೂಂನಲ್ಲಿ ಎರಡು ಸಿರಪ್ ಬಾಟಲಿ ಪತ್ತೆಯಾಗಿದ್ದು, ಗೋವಾ ಪೊಲೀಸರು ಕೆಮ್ಮಿನ ಸಿರಪ್ ವಶಕ್ಕೆ ಪಡೆದಿದ್ದಾರೆ. ಸಾಯಿಸಲೆಂದೇ ಕೆಮ್ಮಿನ ಸಿರಪ್ ನೀಡಿದ್ದಳಾ ಸುಚನಾ..?
ಗೋವಾ ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಪತ್ತೆಯಾಗಿದೆ. ಕ್ಯಾಂಡೋಲಿಮ್ ಸೋಲ್ ಬ್ಯಾನಿಯನ್ ಅಪಾರ್ಟ್ಮೆಂಟ್ ನಲ್ಲಿ ಪರಿಶೀಲನೆ ನಡೆಸಿದ್ದು, ಪೊಲೀಸ್ ಪರಿಶೀಲನೆ ವೇಳೆ ಖಾಲಿ ಬಾಟಲಿಗಳು ಪತ್ತೆಯಾಗಿದೆ. ಉಸಿರುಗಟ್ಟಿಸುವಾಗ ನರಳಾಟ ನೋಡಬಾರದು ಎಂದು ಪ್ಲಾನ್ ಮಾಡಿ, ಕೆಮ್ಮಿನ ಸಿರಪ್ ನೀಡಿ ಮತ್ತು ಬರುವಂತೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸುಚನಾ ಅಪಾರ್ಟ್ಮೆಂಟ್ ಸಿಬ್ಬಂದಿಯಿಂದ ನನಗೆ ಕೆಮ್ಮು-ನೆಗಡಿ ಇದೆ ಎಂದು ಸಿರಫ್ ತರಿಸಿಕೊಂಡಿದ್ದಳು. ಸುಚನಾ ಜನವರಿ 4ರಂದು ಅಪಾರ್ಟ್ಮೆಂಟ್ಗೆ ಬಂದು ತಂಗಿದ್ದಳು. ಜನವರಿ 8ರಂದು ಚೆಕ್ಔಟ್ ಆಗಿದ್ದಾಳೆ.
ಸುಚನಾ ಪತಿಯಿಂದ ತಿಂಗಳಿಗೆ 2.5 ಲಕ್ಷ ಜೀವನಾಂಶ ಕೇಳಿದ್ದಳಂತೆ, ಪತಿ ವೆಂಕಟರಾಮನ್ ತಿಂಗಳಿಗೆ 10 ಲಕ್ಷ ದುಡಿಮೆ ಮಾಡುತ್ತಿದ್ದ. ಸುಚನಾ ಕೊಲೆ ಉದ್ದೇಶ ಇರಲಿಲ್ಲ ಎಂದು ಪೊಲೀಸರ ಮುಂದೆ ಹೇಳಿದ್ದಾಳೆ. ಗೋವಾ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ಫಿನಾಯಿಲ್ ಕುಡಿದು ಯುವಕ ಆ*ತ್ಮಹತ್ಯೆಗೆ ಯತ್ನ..