ಉಡುಪಿ : ಟಿ20 ವಿಶ್ವಕಪ್ ಫೈನಲ್ನಲ್ಲಿ ಟೀಂ ಇಂಡಿಯಾ ಗೆದ್ದು ಬರಲಿ ಎಂದು ಉಡುಪಿಯಲ್ಲಿ ಅಭಿಮಾನಿಗಳು ಸ್ಯಾಂಡ್ ಆರ್ಟ್ ಮೂಲಕ ಶುಭಕೋರಿದ್ದಾರೆ. ಉಡುಪಿಯ ಕೋಟೇಶ್ವರ ಕಡಲ ತೀರದಲ್ಲಿ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಜೈ ಹೋ ಇಂಡಿಯಾ ಕಲಾಕೃತಿ ರಚಿಸಿದ್ದಾರೆ.
ಇನ್ನು ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ಇಂದು ರಾತ್ರಿ 8 ಗಂಟೆಗೆ ದಕ್ಷಿಣ ಆಫ್ರಿಕಾ -ಭಾರತ ಫೈನಲ್ನಲ್ಲಿ ಸೆಣೆಸಾಡಲಿವೆ. ಎರಡೂ ತಂಡಗಳೂ ಬಲಾಡ್ಯ ತಂಡಗಳಾಗಿದ್ದರೂ ಭಾರತದ ಕೈ ಮೇಲಾಗಿದೆ. 10 ವರ್ಷದ ನಂತರ ಎರಡನೇ ಬಾರಿ ಚುಟುಕು ವಿಶ್ವಕಪ್ ಫೈನಲ್ಗೆ ಬಂದು ಗೆಲ್ಲುವ ಹುಮ್ಮಸ್ಸಿನಲ್ಲಿ ಭಾರತವಿದೆ.
ಇದೇ ಮೊದಲ ಬಾರಿ ವಿಶ್ವಕಪ್ ಫೈನಲ್ಗೆ ದಕ್ಷಿಣ ಆಫ್ರಿಕಾ ಲಗ್ಗೆ ಇಟ್ಟಿದೆ. ಎರಡೂ ತಂಡಗಳು 26 ಪಂದ್ಯಗಳನ್ನಾಡಿವೆ. 14ರಲ್ಲಿ ಭಾರತ, 11ರಲ್ಲಿ ದಕ್ಷಿಣ ಆಫ್ರಿಕಾ ಗೆದ್ದಿದೆ. 2007ರಲ್ಲಿ ಚೊಚ್ಚಲ ಕಪ್ ಗೆದ್ದಿದ್ದ ಟೀಂ ಇಂಡಿಯಾ, 17 ವರ್ಷಗಳ ಬಳಿಕ ಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಸೌತ್ ಆಫ್ರಿಕಾ ನೆಲದಲ್ಲೇ ಧೋನಿ ನಾಯಕತ್ವದಲ್ಲಿ ಭಾರತ ಕಪ್ ಬಾಚಿಕೊಂಡಿತ್ತು.
ಇದನ್ನೂ ಓದಿ : ಗದಗ : ಆರೋಪಿಯನ್ನು ಕರೆದೊಯ್ಯೋ ವೇಳೆ ಪೊಲೀಸರ ಮೇಲೆ ದುಷ್ಕರ್ಮಿಗಳಿಂದ ಅಟ್ಯಾಕ್..!