Download Our App

Follow us

Home » ರಾಜಕೀಯ » ಪ್ರಜಾಪ್ರಭುತ್ವವು ಯಾರ ಕೈಗೊಂಬೆಯೂ ಅಲ್ಲ – ಸ್ವಾತಂತ್ರ್ಯೋತ್ಸವ ಭಾಷಣದಲ್ಲೂ ಕೇಂದ್ರಕ್ಕೆ ಸಿದ್ದು ಗುದ್ದು..!

ಪ್ರಜಾಪ್ರಭುತ್ವವು ಯಾರ ಕೈಗೊಂಬೆಯೂ ಅಲ್ಲ – ಸ್ವಾತಂತ್ರ್ಯೋತ್ಸವ ಭಾಷಣದಲ್ಲೂ ಕೇಂದ್ರಕ್ಕೆ ಸಿದ್ದು ಗುದ್ದು..!

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಮಾಣೆಕ್​​ ಷಾ ಪರೇಡ್​ ಗ್ರೌಂಡ್​ನಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿದ್ದಾರೆ. ಮಾಣೆಕ್ ಷಾ ಪರೇಡ್​​  ಮೈದಾನದಲ್ಲಿ ಧ್ವಜಾರೋಹಣ ಬಳಿಕ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ಮೆರೆಯಲಾಗದು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಬಲಿದಾನಕ್ಕೆ ಬೆಲೆಕಟ್ಟಲಾಗದು ಎಂದು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ್ದಾರೆ.

ಇನ್ನು, ಸ್ವಾತಂತ್ರ್ಯೋತ್ಸವ ಭಾಷಣದಲ್ಲೂ ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಪ್ರಾಸಿಕ್ಯೂಷನ್​​​​​ ನೋಟಿಸ್​ಗೂ ಪರೋಕ್ಷವಾಗಿ ಸಿಎಂ ಗರಂ ಆಗಿದ್ದಾರೆ. ಬಿಜೆಪಿ-ಜೆಡಿಎಸ್​ ಪಕ್ಷಕ್ಕೂ ತಿರುಗೇಟು ಕೊಟ್ಟಿದ್ದಾರೆ. “ಜನತೆಯ ತೀರ್ಪನ್ನು ಧಿಕ್ಕರಿಸಿ ಹಿಂಬಾಗಿಲ ರಾಜಕಾರಣ ನಡೆಯುತ್ತಿದೆ. ಹಿಂಬಾಗಿಲ ಮೂಲಕದ ರಾಜಕಾರಣವನ್ನು ಜನತೆ ಎಂದೂ ಸಹಿಸಲ್ಲ, ಸಂವಿಧಾನದ ಆಶಯದಂತೆ ವಿರೋಧ ಪಕ್ಷಗಳು ನಡೆದುಕೊಳ್ಳಬೇಕು. ಪ್ರಜಾಪ್ರಭುತ್ವವು ಯಾರ ಕೈಗೊಂಬೆಯೂ ಅಲ್ಲ ಎಂದಿದ್ದಾರೆ.

ಲೋಕಸಭೆ ಎಲೆಕ್ಷನ್​​ನಲ್ಲಿ ಜನರು ಪಾಠ ಕಲಿಸಿದ್ದಾರೆ. ದೇಶದಲ್ಲಿ ಸಂವಿಧಾನದ ಆಶಯಕ್ಕೆ ಬೆಲೆ ಸಿಗಬೇಕು. ಜಾತಿ-ಮತದ ಆಧಾರದ ರಾಜಕಾರಣದ ಬಗ್ಗೆ ಅಂಬೇಡ್ಕರ್​ ಎಚ್ಚರಿಸಿದ್ದರು. ಸಂವಿಧಾನದ ಆಶಯ ಬುಡಮೇಲು ಮಾಡುವ ವ್ಯಕ್ತಿಗೆ ಅಧಿಕಾರ ಸಿಗಬಾರದು. ಸ್ವಾತಂತ್ರ್ಯ ಹೋರಾಟಗಾರರ ಮೂಲ ಆಶಯದಂತೆ ನಾವು ನಡೆಯಬೇಕು. ಇಲ್ಲದೇ ಹೋದರೆ ನಮ್ಮ ದೇಶದ ರಕ್ಷಣೆ ಸಾಧ್ಯವಿಲ್ಲ. ನೆರೆ-ಹೊರೆಯ ದೇಶದ ಪ್ರಕ್ಷಬ್ಧ ಸ್ಥಿತಿಯು ಇಲ್ಲೂ ಸೃಷ್ಟಿ ಆಗಬಹುದು ಎಂದು ಸಿಎಂ ಸ್ವಾತಂತ್ರ್ಯ ಭಾಷಣದಲ್ಲಿ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಇದನ್ನೂ ಓದಿ : ಮಾಣೆಕ್ ಷಾ ಪರೇಡ್​​ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ…!

Leave a Comment

DG Ad

RELATED LATEST NEWS

Top Headlines

ಮೈಸೂರಿನಲ್ಲಿ ಹಾಡಹಗಲೇ ಮನೆ ಕಳ್ಳತನಕ್ಕೆ ಯತ್ನ – ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಮೈಸೂರು : ಮೈಸೂರಿನಲ್ಲಿ ಹಾಡುಹಗಲೇ ಮನೆಗಳ್ಳತನಕ್ಕೆ ಯತ್ನಿಸಿದ್ದ ಖದೀಮನ ಕಳ್ಳತನದ ಯತ್ನ ವಿಫಲವಾಗಿದೆ. ಜಿಲ್ಲೆಯ ಬನ್ನೂರಿನ ರಾಮದೇವರ ಬೀದಿಯಲ್ಲಿ ಜಯಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನದ ಯತ್ನ

Live Cricket

Add Your Heading Text Here