ಇದೇ ಡಿಸೆಂಬರ್ 20ರಂದು ತೆರೆ ಕಾಣಲಿರುವ ಸೂಪರ್ ಸ್ಟಾರ್ ಉಪೇಂದ್ರ ಅವರು ನಟಿಸಿ ನಿರ್ದೇಶಿಸಿರುವ ಬಹುನಿರೀಕ್ಷಿತ ‘ಯುಐ’ (UI) ಸಿನಿಮಾಗೆ ಬಾಲಿವುಡ್ ನಟ ಆಮಿರ್ ಖಾನ್ ಶುಭ ಹಾರೈಸಿದ್ದಾರೆ. ಈ ಕುರಿತ ವೀಡಿಯೋವನ್ನು ಉಪೇಂದ್ರ ಅವರು ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ.
ಆಮಿರ್ ಖಾನ್ ಅವರು ‘ಯುಐ’ ಚಿತ್ರದ ಟ್ರೈಲರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದು, ಅಲ್ಲದೇ, ಉಪೇಂದ್ರ ಅವರ ಪ್ರತಿಭೆಯನ್ನು ಕೂಡ ಆಮಿರ್ ಖಾನ್ ಹೊಗಳಿದ್ದಾರೆ. ಫ್ಯಾನ್ಸ್ ವಲಯದಲ್ಲಿ ಈ ವಿಡಿಯೋ ಸದ್ಯ ಸಖತ್ ವೈರಲ್ ಆಗುತ್ತಿದೆ.
‘ನಾನು ಈಗ ಉಪೇಂದ್ರ ಜೊತೆ ಇದ್ದೇನೆ. ಅವರ ಸಿನಿಮಾ ಡಿಸೆಂಬರ್ 20ರಂದು ಬಿಡುಗಡೆ ಆಗುತ್ತಿದೆ. ನಾನು ಅವರ ದೊಡ್ಡ ಅಭಿಮಾನಿ. ಟ್ರೈಲರ್ ಅದ್ಭುತವಾಗಿದೆ. ಅದನ್ನು ಕಂಡು ನಾನು ಆಶ್ವರ್ಯಚಕಿತನಾದೆ. ನನ್ನ ಸ್ನೇಹಿತ ಉಪೇಂದ್ರ ಅವರು ಎಂಥ ಅದ್ಭುತವಾದ ಟ್ರೈಲರ್ ಮಾಡಿದ್ದಾರೆ’ ಎಂದು ಆಮಿರ್ ಖಾನ್ ಅವರು ಮನಸಾರೆ ಹೊಗಳಿದ್ದಾರೆ. ಟ್ರೈಲರ್ ಇಷ್ಟ ಆಗಿದ್ದಕ್ಕೆ ಅವರು ಉಪ್ಪಿಯ ಬೆನ್ನು ತಟ್ಟಿದ್ದಾರೆ.
‘ಈ ಸಿನಿಮಾ ದೊಡ್ಡ ಹಿಟ್ ಆಗಲಿದೆ. ಹಿಂದಿ ಪ್ರೇಕ್ಷಕರು ಕೂಡ ತುಂಬ ಇಷ್ಟಪಡಲಿದ್ದಾರೆ. ನಾನಂತೂ ಟ್ರೇಲರ್ ನೋಡಿ ಶಾಕ್ ಆದೆ. ನಿಮಗೆ ನಾನು ಶುಭ ಹಾರೈಸುತ್ತೇನೆ. ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ’ ಎಂದು ಆಮಿರ್ ಖಾನ್ ವಿಶ್ ಮಾಡಿದ್ದಾರೆ. ಅವರ ಈ ಮಾತುಗಳನ್ನು ಕೇಳಿದ ಬಳಿಕ ಹಿಂದಿ ಪ್ರೇಕ್ಷಕರಿಗೆ ‘ಯುಐ’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
ಇದನ್ನೂ ಓದಿ : ಕನಸಿನ ರಾಣಿ ಮಾಲಾಶ್ರೀ, ನಟಿ ತನಿಷಾ ಕುಪ್ಪಂಡ ನಟನೆಯ ‘ಪೆನ್ಡ್ರೈವ್’ ಸಿನಿಮಾದ ಶೂಟಿಂಗ್ ಕಂಪ್ಲೀಟ್..!