ಇಂದು ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಸಮಾಧಿ ಬಳಿ ಇಂದು ಬೆಳಿಗ್ಗೆಯಿಂದಲೇ ಅಭಿಮಾನಿಗಳ ಸಾಗರ ಹರಿದುಬಂದಿದೆ. ಅಭಿಮಾನಿಗಳು ಅಷ್ಟೇ ಅಲ್ಲ, ಸಿನಿಮಾ ಮಂದಿ ಕೂಡ ಅಪ್ಪು ಅಭಿಮಾನಿ ಆಗಿದ್ದರು. ಆ ವಿಚಾರದಲ್ಲಿ ನಟಿ-ನಿರೂಪಕಿ ಅನುಶ್ರೀ ಪುನೀತ್ ಅವರ ಮಹಾನ್ ಅಭಿಮಾನಿ ಆಗಿದ್ದಾರೆ. ಅದೆಷ್ಟು ಅಂದ್ರೆ, ಅಪ್ಪು ಇಲ್ಲದೆ ಮಾತುಗಳನ್ನ ಆಡೋದಿಲ್ಲ. ಅಷ್ಟೊಂದು ಅಭಿಮಾನವನ್ನ ಈಗಲೂ ಇಟ್ಟುಕೊಂಡಿರೋ ಆ್ಯಂಕರ್ ಅನುಶ್ರೀ, ಇದೀಗ ಅಪ್ಪು ಮೂರನೇ ವರ್ಷದ ಪುಣ್ಯ ಸ್ಮರಣೆ ದಿನ ಒಂದು ಭಾವುಕ ಪೋಸ್ಟ್ ಹಾಕಿದ್ದಾರೆ.
ಅಪ್ಪು ಹಾಡಿರೋ ಹಾಡೊಂದರ ಸಾಲನ್ನೆ ಇಲ್ಲಿ ವಿಶೇಷವಾಗಿಯೇ ಅನುಶ್ರೀ ಅವರು ಬರೆದಿದ್ದಾರೆ. ಈ ಮೂಲಕ ತಮ್ಮ ಅಭಿಮಾನವನ್ನ ತೋರಿದ್ದಾರೆ. ಆ್ಯಂಕರ್ ಅನುಶ್ರೀ ಅಪ್ಪು ಬಗ್ಗೆ ವಿಶೇಷ ಗೌರವ ಮತ್ತು ಪ್ರೀತಿ ಹೊಂದಿದ್ದಾರೆ. ಅಪ್ಪು ಸರ್ ಅಂದ್ರೆ ಅನುಶ್ರೀ ಮೊಗದಲ್ಲಿ ಒಂದು ಹೊಳಪು ಕಂಡು ಬರುತ್ತದೆ. ಅದೇನೋ ವಿಶೇಷ ಗೌರವ ಹೊಂದಿರೋ ಅನುಶ್ರೀ, ಅಪ್ಪು ಬಗ್ಗೆ ಸದಾ ಮಾತು ಆಡ್ತಾನೇ ಇರ್ತಾರೆ. ಮಾತನಾಡುತ್ತಲೇ ಹಲವು ಬಾರಿ ಭಾವುಕರಾಗಿದ್ದು ಇದೆ.
ಹಾಗೆಯೇ ಅಪ್ಪು ಪುಣ್ಯಸ್ಮರಣೆಯ ಈ ದಿನ ಅನುಶ್ರೀ ಇನ್ನಷ್ಟು ಭಾವುಕರಾಗಿದ್ದು, ಅಪ್ಪು ಇಲ್ಲದ ಮೂರು ವರ್ಷಗಳನ್ನ ಮತ್ತೆ ಮತ್ತೆ ನೆನಪಿಸಿಕೊಂಡಿದ್ದಾರೆ. ಇನ್ನಿಲ್ಲದ ನೋವನ್ನ ಸಾಲುಗಳಲ್ಲಿಯೇ ಬರೆದು ತಿಳಿಸಿದ್ದಾರೆ.
“ನಮ್ಮ ಕಂಗಳ ಬಿಸಿಯ ಹನಿಗಳು ನೂರು ಬಾರಿ ಕೂಗಿವೆ. ನಿಮ್ಮ ನಗುವ ಮೊಗವ ನೋಡಲು ಕೋಟಿ ಕಂಗಳು ಕಾಯುತ್ತಿದೆ. miss u sir.. ನೀವಿಲ್ಲದೆ ಅಭಿಮಾನ ಇಲ್ಲ. ನೀವಿಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ. ನೀವಿಲ್ಲದೆ ಬದುಕಿಗೆ ಕಳೆ ಇಲ್ಲ. ಹೀಗೆ ಇನ್ನಷ್ಟು ಭಾವುಕ ಮಾತುಗಳನ್ನ ಅನುಶ್ರೀ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಬಿಗ್ ಬಾಸ್ ಮನೆಯಿಂದ ನಾಲ್ಕನೇ ವಾರ ಹಂಸ ಎಲಿಮಿನೇಟ್..!