ಮಂಡ್ಯ : ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮದಲ್ಲಿ ನಡೆದಿದೆ. ಗೃಹಿಣಿಯ ಅನುಮಾನಸ್ಪದ ಸಾವಿನ ಹಿಂದೆ ಕೊಲೆ ಶಂಕೆ ವ್ಯಕ್ತವಾಗಿದೆ. 21 ವರ್ಷದ ಸ್ವಾತಿ ಮೃತ ಗೃಹಿಣಿ.
ಮೃತ ಗೃಹಿಣಿಯ ಪೋಷಕರಿಂದ ಗಂಡನ ಮನೆಯವರ ವಿರುದ್ದ ಕೊಲೆ ಆರೋಪ ಕೇಳಿಬಂದಿದ್ದು, ಗಂಡನ ಮನೆಯವರು ಘಟನೆ ಬಳಿಕ ಮನೆಯಿಂದ ನಾಪತ್ತೆಯಾಗಿದ್ದಾರೆ. ಇದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಹಾಗಾಗಿ ಮೃತ ಗೃಹಿಣಿ ಮನೆಯವರು ಗಂಡನ ಮನೆ ಮೇಲೆ ದಾಂಧಲೆ ನಡೆಸಿದ್ದಾರೆ. ಪೀಠೋಪಕರಣ ಧ್ವಂಸ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಘಟನಾ ಸ್ಥಳಕ್ಕೆ ಕಿಕ್ಕೇರಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ನಾಪತ್ತೆಯಾದ ಗಂಡ ಹಾಗೂ ಅವನ ಮನೆಯವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಹೀಲಿಯಂ ಗ್ಯಾಸ್ ಬಳಸಿ ಟೆಕ್ಕಿ ಆತ್ಮಹತ್ಯೆ..!
Post Views: 187