ಚಿತ್ರದುರ್ಗ : ಮದುವೆಯಾಗಿ 2 ತಿಂಗಳಿಗೇ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗದ ಮಠದ ಕುರುಬರಹಟ್ಟಿಯಲ್ಲಿ ನಡೆದಿದೆ. 22 ವರ್ಷದ ತಾಯಮ್ಮ ಮೃತ ದುರ್ದೈವಿ. ಪೋಷಕರು ಪತಿ ವಿರುದ್ದ ಕೊಲೆ ಆರೋಪ ಮಾಡಿದ್ದಾರೆ.
ತಾಯಮ್ಮ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗಂಡನೇ ಕೊಲೆ ಮಾಡಿ ನೇಣು ಹಾಕಿದ್ದಾನೆಂದು ಯುವತಿಯ ಪೋಷಕರು ಆರೋಪ ಮಾಡಿದ್ದಾರೆ. 2 ತಿಂಗಳ ಹಿಂದೆ ವಿಜಯನಗರ ಜಿಲ್ಲೆ ಹರಪನಹಳ್ಳಿ ಮೂಲದ ತಾಯಮ್ಮ ಮಠದ ಕುರುಬರಹಟ್ಟಿಯ ರಮೇಶ್ ಮದ್ವೆಯಾಗಿದ್ದಳು.
ಮದುವೆಯಾದ ನಂತರ ಗಂಡ ರಮೇಶ್ ನೀನು ಕಪ್ಪಗಿದ್ದೀಯ, ನನಗೆ ಬೇಡ ಎಂದಿದ್ನಂತೆ. ಇದೇ ವಿಚಾರವಾಗಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ಪತಿಯ ಕಾಟ ತಾಳಲಾರದೇ ಈ ವಿಚಾರವನ್ನು ತಾಯಮ್ಮ ತವರು ಮನೆಗೆ ತಿಳಿಸಿದ್ದಳು. ಇದೀಗ ರಮೇಶ್ ಮನೆಯ ಮುಂದೆ ತಾಯಮ್ಮ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ : ವಿಜಯಪುರ : ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಯುವಕ ಸಾ*ವು..!
Post Views: 162