ಕೋಲಾರ : ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿದ್ದ ದಂಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಲಾರದ ಕೋಡಿ ಕಣ್ಣೂರು ಗ್ರಾಮದಲ್ಲಿ ನಡೆದಿದೆ. ಮುನಿರಾಜು ಹಾಗೂ ರತ್ನಮ್ಮ ಗಾಯಳುಗಳು ಎಂದು ತಿಳಿದು ಬಂದಿದೆ.
ಸಿಲಿಂಡರ್ ಬದಲಿಸಿ ಸ್ಟೌ ಅಂಟಿಸಿದ ವೇಳೆ ಏಕಾಏಕಿ ಸಿಲಿಂಡರ್ ಬ್ಲಾಸ್ಟ್ ಆಗಿದ್ದು, ಪರಿಣಾಮ ಮನೆ ಛಿದ್ರ ಛಿದ್ರವಾಗಿದ್ದು, ಮನೆಯಲ್ಲಿದ್ದ ಗೃಹ ಬಳಕೆ ವಸ್ತುಗಳೆಲ್ಲ ಪೀಸ್ ಪೀಸ್ ಆಗಿದೆ. ಮುನಿರಾಜು ಹಾಗೂ ರತ್ನಮ್ಮ ದಂಪತಿಯ ಮಗಳು ನೇತ್ರಾಗೂ ಗಾಯವಾಗಿದ್ದು, ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುನಿರಾಜು ಹಾಗೂ ರತ್ನಮ್ಮಗೆ ಶೇ 40ರಷ್ಟು ಸುಟ್ಟ ಗಾಯಗಳಾಗಿದೆ. ಕೋಲಾರ ಗ್ರಾಮಾಂತರ ಪೊಲೀಸರು, ತಹಶೀಲ್ದಾರ್ ನಯನ ಎಂ. ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಗೋಲ್ಡನ್ ಟೆಂಪಲ್ ಮುಂಭಾಗವೇ ಫೈರಿಂಗ್ - ಅಕಾಲಿದಳದ ಲೀಡರ್ ಸುಖ್ಬೀರ್ ಸಿಂಗ್ ಹತ್ಯೆಗೆ ಯತ್ನ..!
Post Views: 141