ಮುಂಬೈ : ಮುಂಬೈನಲ್ಲಿ ನಡೆಯುತ್ತಿದ್ದ ‘ಹೌಸ್‌ಫುಲ್ 5’ ಶೂಟಿಂಗ್ ವೇಳೆ ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಸಣ್ಣ ಗಾಯವಾಗಿದೆ. ಸಿನಿಮಾದಲ್ಲಿ ಸ್ಟಂಟ್ ಸೀನ್ ಮಾಡುವಾಗ ಅಕ್ಷಯ್ ಕುಮಾರ್ ಕಣ್ಣಿಗೆ ಪೆಟ್ಟಾಗಿದ್ದು, ತಕ್ಷಣವೇ ವೈದ್ಯರು ಸ್ಥಳಕ್ಕೆ ಬಂದು ನಟನಿಗೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದೊಂದು ಸಣ್ಣ ಗಾಯವಾಗಿದ್ದು, ಅಭಿಮಾನಿಗಳು ಗಾಬರಿಪಡುವ ಅಗತ್ಯವಿಲ್ಲ. ಅಕ್ಷಯ್ ಸ್ಟಂಟ್ ಸೀನ್ ಮಾಡುತ್ತಿದ್ದಾಗ ವಸ್ತುವೊಂದು ಹಾರಿ ಬಂದು ಕಣ್ಣಿಗೆ ತಗುಲಿದೆ. ಈ ವೇಳೆ ಅಕ್ಷಯ್ ಕುಮಾರ್ ಕಣ್ಣಿಗೆ ಗಾಯವಾಗಿದೆ. ತಕ್ಷಣ ಕಣ್ಣಿನ ವೈದ್ಯರನ್ನು ಸೆಟ್‌ಗೆ ಕರೆಸಿ ಪರೀಕ್ಷೆ ನಡೆಸಲಾಗಿದೆ.
ಕಣ್ಣಾಗಿದ್ದರಿಂದ ಅಕ್ಷಯ್ ಕುಮಾರ್ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದೇ ತಕ್ಷಣ ಚಿಕಿತ್ಸೆ ಪಡೆದುಕೊಂಡಿದ್ದಾರೆ. ವೈದ್ಯರು ನಟನ ಕಣ್ಣಿಗೆ ಬ್ಯಾಂಡೇಜ್ ಹಾಕಿದ್ದು, ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಈ ಘಟನೆ ನಂತರ ಹೌಸ್‌ಫುಲ್ 5 ಸಿನಿಮಾದ ಶೂಟಿಂಗ್ ಇತರೆ ಕಲಾವಿದರ ಜೊತೆಗೆ ಮುಂದುವರೆದಿದ್ದು, ಸೆಟ್‌ಗೆ ಶೀಘ್ರದಲ್ಲೇ ಅಕ್ಷಯ್ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೌಸ್‌ಫುಲ್ 5 ಸಿನಿಮಾ ಈಗಾಗ್ಲೇ ಅಂತಿಮ ಹಂತದ ಚಿತ್ರೀಕರಣಕ್ಕೆ ತಲುಪಿದ್ದು, ರಿಲೀಸ್‌ಗೆ ವಿಳಂಬವಾಗಬಾರದು ಎಂಬ ಕಾರಣಕ್ಕೆ ಅಕ್ಷಯ್ ಕುಮಾರ್ ಬೇಗ ಶೂಟಿಂಗ್‌ಗೆ ಮರಳೋದಾಗಿ ಪ್ರೊಡಕ್ಷನ್ ಹೌಸ್ ನಾಡಿಯಾಡ್ವಾಲಾ ಗ್ರ್ಯಾಂಡ್ಸನ್ ಹೇಳಿಕೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ : ಅಲ್ಲು ಅರ್ಜುನ್‌ಗೆ ಮತ್ತೆ ಸಂಕಷ್ಟ – ಬೇಲ್ ಪ್ರಶ್ನಿಸಿ ತೆಲಂಗಾಣ ಪೊಲೀಸರು ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆ..!