ದೇವನಹಳ್ಳಿ : ನೋಡ ನೋಡ್ತಿದ್ದಂತೆ ಹೋಟೆಲ್ ಬ್ಲಾಸ್ಟ್ ಆಗಿ ಧಗ-ಧಗನೆ ಹೊತ್ತಿ ಉರಿದ ಘಟನೆ ದೇವನಹಳ್ಳಿ ತಾಲೂಕು ಕೊಡಗುರ್ಕಿಯಲ್ಲಿ ನಡೆದಿದೆ.
ಪ್ರೆಸ್ಟೀಜ್ ಗೇಟ್ನಲ್ಲಿದ್ದ ರಸ್ತೆ ಬದಿಯ ಸಣ್ಣ ಹೋಟೆಲ್ನಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿ ಈ ದುರ್ಘಟನೆ ನಡೆದಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಯಮರಹಳ್ಳಿ ಗ್ರಾಮದ ಸೀನಪ್ಪ ಎಂಬುವರಿಗೆ ಸೇರಿದ ಹೋಟೆಲ್ ಇದಾಗಿದ್ದು, ಹೋಟೆಲ್ ಬಾಗಿಲು ಹಾಕಿ ಆಗಷ್ಟೆ ಮಾಲೀಕ ಮನೆಗೆ ತೆರಳಿದ್ದ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಹೋಟೆಲ್ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ವಿಶ್ಚನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಉತ್ತರ ಕನ್ನಡ, ಕರಾವಳಿ ಭಾಗದಲ್ಲಿ ಮುಂದುವರೆದ ವರುಣನ ಆರ್ಭಟ : ಶಾಲಾ-ಕಾಲೇಜುಗಳಿಗೆ ರಜೆ ಘೊಷಣೆ..!
Post Views: 1,084