Download Our App

Follow us

Home » ರಾಜ್ಯ » ಕೋಲ್ಕತ್ತಾ ವೈದ್ಯೆ ರೇಪ್‌, ಹತ್ಯೆ ವಿರುದ್ಧ ಮುಷ್ಕರ – ಇಂದು 24 ಗಂಟೆ ದೇಶದ ಆಸ್ಪತ್ರೆಗಳು ಬಂದ್..!

ಕೋಲ್ಕತ್ತಾ ವೈದ್ಯೆ ರೇಪ್‌, ಹತ್ಯೆ ವಿರುದ್ಧ ಮುಷ್ಕರ – ಇಂದು 24 ಗಂಟೆ ದೇಶದ ಆಸ್ಪತ್ರೆಗಳು ಬಂದ್..!

ಬೆಂಗಳೂರು : ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.  24 ಗಂಟೆಗಳ ಕಾಲ ದೇಶದ ಆಸ್ಪತ್ರೆಗಳು ಬಂದ್​ ಆಗಲಿದೆ.

ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆವರೆಗೆ ಪ್ರೊಟೆಸ್ಟ್​ ನಡೆಯಲಿದ್ದು, ತುರ್ತುಸೇವೆ(ಎಮರ್ಜೆನ್ಸಿ) ಬಿಟ್ಟು ಉಳಿದ ಸೇವೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. OPD, ಆಪರೇಷನ್​ ಥಿಯೇಟರ್​ಗಳನ್ನೂ ಬಂದ್ ಮಾಡಿದ್ದಾರೆ. ದೇಶಾದ್ಯಂತ ಮೆಡಿಕಲ್​ ಸೇವೆಗಳನ್ನು ಬಂದ್ ಮಾಡಲು ಭಾರತೀಯ ವೈದ್ಯರ ಸಂಘ ಕರೆ ನೀಡಿದ್ದು, ವೈದ್ಯರು ಇಡೀ ದಿನ ಹೊರ ರೋಗಿಗಳ ವಿಭಾಗ ಕೆಲಸ ಮಾಡಲ್ಲ.

ಆಪರೇಷನ್​ ಥಿಯೇಟರ್​ಗಳಲ್ಲಿ ಆಪರೇಷನ್​​​ಗಳು ನಡೆಯಲ್ಲ, ಆಧುನಿಕ ಸೇವೆ ನೀಡುವ ಎಲ್ಲಾ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೂ ಅನ್ವಯವಾಗಿದೆ. ಮಹಿಳಾ ಡಾಕ್ಟರ್​ಗಳಿಗೆ ಸೂಕ್ತ ಭದ್ರತೆ ಇಲ್ಲ ಎಂದು ಆರೋಪಿಸಿ ಪ್ರೊಟೆಸ್ಟ್ ನಡೆಸುತ್ತಿದ್ದಾರೆ. ಹೀಗಾಗಿ ಇಂದು ಆಸ್ಪತ್ರೆಗಳಲ್ಲಿ ತುರ್ತು ಸೇವೆ ಮಾತ್ರ ಲಭ್ಯವಾಗಿದೆ. ಖಾಸಗಿ ಆಸ್ಪತ್ರೆ, ಕ್ಲಿನಿಕ್​​ಗಳಿಂದಲೂ ಪ್ರತಿಭಟನೆಗೆ ಸಾಥ್​​ ನೀಡಿದ್ದು, IMA, PHANA ಅಡಿಯಲ್ಲಿ ಬರುವ ಖಾಸಗಿ ಆಸ್ಪತ್ರೆಗಳೆಲ್ಲ ಬಂದ್ ಆಗಿದೆ. ರಾಜ್ಯಾದ್ಯಂತ ಸಾವಿರಾರು ವೈದ್ಯರಿಂದ ಮುಷ್ಕರಕ್ಕೆ ಬಂಬಲ ನೀಡಿದ್ದಾರೆ.

ಏನಿರಲ್ಲ..?

  • OPD ಸೇವೆಗಳು ಇರಲ್ಲ
  • ಡಯಾಲಿಸಿಸ್​ ಇರಲ್ಲ
  • ಜ್ವರ, ಶೀತ ನೆಗಡಿಗೆ ಚಿಕಿತ್ಸೆ ಸಿಗಲ್ಲ
  • ಕ್ಲಿನಿಕ್​ ಸೇವೆ, ಮಕ್ಕಳ ಸೇವೆ ಬಂದ್
  • ಡೆಂಟಲ್​ ಸರ್ವಿಸ್​, ಡೆಂಟಲ್​ OPD ಇರಲ್ಲ
  • ಮೆಡಿಕಲ್​ ಲ್ಯಾಬ್​ಗಳು ಇರೋದು ಡೌಟ್​ಏನೆಲ್ಲಾ ಇರುತ್ತೆ..
  • ಮೆಡಿಕಲ್​ ಶಾಪ್​ಗಳು​
  • ಒಳ ರೋಗಿಗಳ ಸೇವೆಗಳು
  • ಹೆರಿಗೆ ಸೇವೆಗಳು
  • ಎಮರ್ಜೆನ್ಸಿ ಸರ್ಜರಿ
  • ತುರ್ತು ಚಿಕಿತ್ಸಾ ವಿಭಾಗ
  • ಆ್ಯಂಬುಲೆನ್ಸ್ ಇರಲಿವೆ

ಇದನ್ನೂ ಓದಿ : ಬೆಂಗಳೂರಿನಲ್ಲಿ ಆಟೋ ಮೇಲೆ ಬಿದ್ದ ಬೃಹತ್​ ಮರ – ಚಾಲಕ ಸಾ*ವು..!

Leave a Comment

DG Ad

RELATED LATEST NEWS

Top Headlines

ಮಾಜಿ ಪ್ರಿಯತಮೆಗೆ ಖಾಸಗಿ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ – ಸೀರಿಯಲ್​ ನಟ ವರುಣ್​ ಆರಾಧ್ಯ ವಿರುದ್ಧ FIR..!

ಬೆಂಗಳೂರು: ಸೋಶಿಯಲ್‌ ಮೀಡಿಯಾದ ಮೂಲಕ ಫೇಮಸ್​​ ಆಗಿದ್ದ ವರ್ಷಾ ಕಾವೇರಿ ಮತ್ತು ವರುಣ್‌ ಆರಾಧ್ಯ ಕಳೆದ ವರ್ಷ ಇಬ್ಬರು ಬ್ರೇಕಪ್ ಬಗ್ಗೆ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.

Live Cricket

Add Your Heading Text Here