Download Our App

Follow us

Home » ಅಪರಾಧ » ಸಿನಿಮಾ ಹೆಸರಿನಲ್ಲಿ 40 ಲಕ್ಷ ರೂ. ಪಡೆದು ಹನಿಟ್ರ್ಯಾಪ್ ಮಾಡಿದ ಗ್ಯಾಂಗ್​ ವಿರುದ್ಧ FIR..!

ಸಿನಿಮಾ ಹೆಸರಿನಲ್ಲಿ 40 ಲಕ್ಷ ರೂ. ಪಡೆದು ಹನಿಟ್ರ್ಯಾಪ್ ಮಾಡಿದ ಗ್ಯಾಂಗ್​ ವಿರುದ್ಧ FIR..!

ಬೆಂಗಳೂರು : ಸಿನಿಮಾ ಹೆಸರಿನಲ್ಲಿ ಯುವತಿಯೊಬ್ಬಳು ಉದ್ಯಮಿಗೆ ಹನಿಟ್ರ್ಯಾಪ್‌ ಮೂಲಕ ಖೆಡ್ಡಾಗೆ ಕೆಡವಿ 40 ಲಕ್ಷ ರೂ. ರೂಪಾಯಿ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಉದ್ಯಮಿ ನೀಡಿರುವ ದೂರಿನನ್ವಯ ದಿಲೀಪ್, ರವಿಕುಮಾರ್ ಹಾಗೂ ಯುವತಿ ವಿರುದ್ದ ಅಶೋಕ್​ನಗರ ಠಾಣೆಯಲ್ಲಿ FIR ದಾಖಲಾಗಿದೆ.

ದೂರುದಾರರು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಲೈಟ್ ಆರ್ಟ್ ಸ್ಟುಡಿಯೋ ಹೊಂದಿದ್ದಾರೆ. ಇನ್ನು ಇವರಿಗೆ ಕುಟುಂಬ ಎಂಬ ಸೋಷಿಯಲ್ ಮೀಡಿಯಾ ಆಫ್​​ನಲ್ಲಿ ಯುವತಿಯೊಬ್ಬಳು ಪರಿಚಿತಳಾಗಿದ್ದಾಳೆ. ಈಕೆ ಕಳೆದ ನಾಲ್ಕು ವರ್ಷಗಳದಿಂದ ಸಿನಿಮಾ ಮಾಡುತ್ತಿರೋದಾಗಿ ಹೇಳಿಕೊಂಡು ಉದ್ಯಮಿ ಬಳಿ 4.25 ಲಕ್ಷ ಹಣ ವರ್ಗಾಯಿಸಿಕೊಂಡಿದ್ದಾಳೆ.

ಇನ್ನು ಹಣ ವಾಪಸ್ ಕೇಳಿದಾಗ ಯುವತಿ ಉದ್ಯಮಿಯನ್ನು ಗೊಟ್ಟಿಗೆರೆ ಬಳಿ ಕರೆಸಿಕೊಂಡಿದ್ದಳು. ಈ ವೇಳೆ ಉದ್ಯಮಿಗೆ ಲೈಂಗಿಕ ಕ್ರಿಯೆಗೆ ಪ್ರಚೋದಿಸಿ ವಿಡಿಯೋ ‍ಚಿತ್ರೀಕರಿಸಿಕೊಂಡಿದ್ದಳು. ನಂತರ ವಿಡಿಯೋ ತೋರಿಸಿ ದೂರು ದಾಖಲು ಮಾಡಿ, ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಳು.

Leave a Comment

DG Ad

RELATED LATEST NEWS

Top Headlines

BBK11: ‘ನಿಮ್ಮ ರೀತಿಯ ಫೂಟೇಜ್ ನನಗೆ ಬೇಡ’ – ಮೋಕ್ಷಿತಾ ಖಡಕ್​ ಮಾತಿಗೆ ಜಗದೀಶ್ ಪುಲ್​ ಸೈಲೆಂಟ್..!

ಬಿಗ್‌ ಬಾಸ್‌ ಮನೆ ಈಗ ರಣರಂಗವಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. 16 ಸ್ಪರ್ಧಿಗಳ ಮಧ್ಯೆ ಒಂಟಿ ಮನೆಯಲ್ಲಿ ಆಟ ಮುಂದುವರಿದಿದೆ. ಮೊದಲ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್

Live Cricket

Add Your Heading Text Here