ಬೆಂಗಳೂರು : ಡೆಲಿವರಿ ಮಾಡುವ ವೇಳೆ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಬಿಗ್ ಬಾಸ್ಕೆಟ್ನ ಡೆಲಿವರ್ ಬಾಯ್ ಅನ್ನು ವೈಟ್ ಪಿಲ್ಡ್ ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ಬಂಧಿತ ಆರೋಪಿ.
ಬಂಧಿತ ಆರೋಪಿ ಪ್ರದೀಪ್ ಬಿಗ್ ಬಾಸ್ಕೆಟ್ನಲ್ಲಿ ಡೆಲಿವರ್ ಮಾಡುವ ವೇಳೆ ಕಳ್ಳತನಕ್ಕೆ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದನು. ಕೀ ಇಟ್ಟ ಜಾಗ ನೋಡಿಕೊಂಡು ಯಾರು ಇಲ್ಲದಾಗ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿನು.
ಇತ್ತೀಚಿಗೆ ಮನೆಯೊಂದರಲ್ಲಿ ಕಳ್ಳತನ ಮಾಡ್ತಿದ್ದ ವೇಳೆ ಆರೋಪಿ ಮಾಲೀಕರ ಬಂದಾಗ ಲಾಕ್ ಆಗಿದ್ದಾನೆ. ತಪ್ಪಿಸಿಕೊಂಡು ಹೋಗುವಾಗ ಆರೋಪಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಟ್ರೆಸ್ ಮಾಡಿ ಆರೋಪಿ ಪ್ರದೀಪ್ನನ್ನು ವೈಟ್ ಪಿಲ್ಡ್ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಖದೀಮ ಒಂದೇ ಠಾಣೆಯ ಆರು ಕಡೆ ಕಳ್ಳತನ ಮಾಡಿರುವ ವಿಚಾರ ಬಾಯ್ಬಿಟ್ಟಿದ್ದಾನೆ. ಇನ್ನು ಕೆಲವು ಮನೆ ಮಾಲೀಕರಿಗೆ ಆತ ಕಳ್ಳತನ ಮಾಡಿರುವ ವಿಚಾರ ಇನ್ನೂ ಗೊತ್ತೆ ಇರಲಿಲ್ಲ. ಪೊಲೀಸರು ಈ ವಿಚಾರ ಹೇಳಿದಾಗ ಮನೆ ಮಾಲೀಕರು ಶಾಕ್ ಆಗಿದ್ದಾರೆ. ಈ ಹಿಂದೆ ಆರೋಪಿ ಪ್ರದೀಪ್ನನ್ನು ಮಹಾದೇವಪುರ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ : ದರ್ಶನ್ ಫ್ಯಾನ್ಸ್ ಹುಚ್ಚಾಟಕ್ಕೆ ಶ್ರವಣ ಶಕ್ತಿಯನ್ನೇ ಕಳ್ಕೊಂಡ ಹಿರಿಯ ಸಾಹಿತಿ ಗೊರೂರು ಚೆನ್ನಬಸಪ್ಪ..!