Download Our App

Follow us

Home » ಸಿನಿಮಾ » “ರಾವುತ” ಸಿನಿಮಾದ ಸಾಂಗ್ಸ್ ರಿಲೀಸ್ – ಚಿತ್ರತಂಡಕ್ಕೆ ಶುಭಕೋರಿದ ಕಾಂಗ್ರೆಸ್ ಮುಖಂಡ ಹೆಚ್ ಎಂ ರೇವಣ್ಣ..!

“ರಾವುತ” ಸಿನಿಮಾದ ಸಾಂಗ್ಸ್ ರಿಲೀಸ್ – ಚಿತ್ರತಂಡಕ್ಕೆ ಶುಭಕೋರಿದ ಕಾಂಗ್ರೆಸ್ ಮುಖಂಡ ಹೆಚ್ ಎಂ ರೇವಣ್ಣ..!

ವಿಶ್ವಕರ್ಮ ಸಿನಿಮಾಸ್ ಲಾಂಛನದಲ್ಲಿ ಈರಣ್ಣ ಸುಭಾಷ್ ಬಡಿಗೇರ್ ನಿರ್ಮಿಸಿರುವ, ಸಿದ್ದುವಜ್ರಪ್ಪ ನಿರ್ದೇಶನದ ಹಾಗೂ ರಾಜ್ ಪ್ರವೀಣ್ ನಾಯಕನಾಗಿ ನಟಿಸಿರುವ “ರಾವುತ” ಚಿತ್ರದ ಹಾಡುಗಳು ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕಾಂಗ್ರೆಸ್‌ ಮುಖಂಡ ಹೆಚ್ ಎಂ ರೇವಣ್ಣ “ರಾವುತ” ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸಿರಿ ಮ್ಯೂಸಿಕ್ ನಲ್ಲಿ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಹಾಡುಗಳ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡರು.

ಇದು ನನ್ನ ಮೊದಲ ನಿರ್ದೇಶನದ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಸಿದ್ದು ವಜ್ರಪ್ಪ, ಇದು ಸಾವಿನ ನಂತರ ನಡೆಯುವ ಕಥೆ.‌ ಈ ಕುರಿತು ನಾನು ಪುಸ್ತಕಗಳನ್ನು ಓದಿ ತಿಳಿದುಕೊಂಡಿದ್ದೇನೆ. ಗರುಡ ಪುರಾಣದ ಕೆಲವು ಅಂಶಗಳು ಹಾಗೂ ನಾನು ಚಿಕ್ಕವಯಸ್ಸಿನಲ್ಲಿ ಕಂಡಿದ್ದ ಕೆಲವು ಘಟನೆಗಳು ಈ ಕಥೆಗೆ ಸ್ಪೂರ್ತಿ. ಚಿತ್ರದ ನಾಯಕನಾಗಿ ರಾಜ್ ಪ್ರವೀಣ್ ಅಭಿನಯಿಸಿದ್ದಾರೆ. ಶಿವಬಸವ ಹಾಗೂ ಬಲ್ಲವ ಎರಡು ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನಾಯಕಿ ಭವಾನಿ ಪುರೋಹಿತ್ ಅವರು ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಹಾಡುಗಳಿದ್ದು ಸುಚಿನ್ ಶರ್ಮ ಸಂಗೀತ ನೀಡಿದ್ದಾರೆ‌. ವಿನಯ್ ಗೌಡ ಈ ಚಿತ್ರದ ಛಾಯಾಗ್ರಹಕರು. ಇತ್ತೀಚೆಗೆ ಚಿತ್ರದ ಸೆನ್ಸಾರ್ ಸಹ ಮುಗಿದಿದ್ದು, ಮಂಡಳಿಯಿಂದ ಚಿತ್ರಕ್ಕೆ ಮೆಚ್ಚುಗೆ ಮಾತುಗಳು ಕೇಳಿಬಂದಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದರು.

ಇದು ನನ್ನ ಅಭಿನಯದ ಮೂರನೇ ಚಿತ್ರ. ನಿರ್ದೇಶಕರು ಹಾಗೂ ನನ್ನದು ಎಂಟು ವರ್ಷಗಳ ಗೆಳೆತನ. ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಕಥೆ ಮೆಚ್ಚಿ, ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯಾವಾದ. ನಿರ್ದೇಶಕರು ಹೇಳಿದ ಹಾಗೆ ನಾನು ಈ ಚಿತ್ರದಲ್ಲಿ ಎರಡಲ್ಲ, ಮೂರು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕ ರಾಜ್ ಪ್ರವೀಣ್ ಮಾಹಿತಿ ಹಂಚಿಕೊಂಡರು.

ನಿರ್ಮಾಪಕ ಈರಣ್ಣ ಸುಭಾಷ್ ಬಡಿಗೇರ್ ಅವರು ಮಾತನಾಡಿ, ನಾನು ಮೂಲತಃ ಐಟಿ ಉದ್ಯೋಗಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ಸಿನಿಮಾ ನಿರ್ಮಾಣಕ್ಕೆ ಮುಂದಾದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು. ಇನ್ನು ಚಿತ್ರದ ನಾಯಕಿ ಭವಾನಿ ಪುರೋಹಿತ್, ಸಂಗೀತ ನಿರ್ದೇಶಕ ಸುಚಿನ್ ಶರ್ಮ, ಸಿರಿಚಿಕ್ಕಣ್ಣ, ರಾಘವ್ ಗೌಡಪ್ಪ, ಮಾರೇಶ್, ನರಸಿಂಹ ಹಾಗೂ ಹರ್ಷ ವರ್ಧನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

 

ಇದನ್ನೂ ಓದಿ : ‘ಯಲಾಕುನ್ನಿ’ ಚಿತ್ರದ ಫಸ್ಟ್ ಲುಕ್ ರಿಲೀಸ್​​ – ಕೋಮಲ್ ಕುಮಾರ್ ವಜ್ರಮುನಿ ಲುಕ್​​​ಗೆ ಫ್ಯಾನ್ಸ್​​​ ಫಿದಾ..!

Leave a Comment

DG Ad

RELATED LATEST NEWS

Top Headlines

BBK11: ‘ನಿಮ್ಮ ರೀತಿಯ ಫೂಟೇಜ್ ನನಗೆ ಬೇಡ’ – ಮೋಕ್ಷಿತಾ ಖಡಕ್​ ಮಾತಿಗೆ ಜಗದೀಶ್ ಪುಲ್​ ಸೈಲೆಂಟ್..!

ಬಿಗ್‌ ಬಾಸ್‌ ಮನೆ ಈಗ ರಣರಂಗವಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. 16 ಸ್ಪರ್ಧಿಗಳ ಮಧ್ಯೆ ಒಂಟಿ ಮನೆಯಲ್ಲಿ ಆಟ ಮುಂದುವರಿದಿದೆ. ಮೊದಲ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್

Live Cricket

Add Your Heading Text Here