ದಾವಣಗೆರೆ : ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆ ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸತೀಶ್ ಪೂಜಾರಿ ಭಾಷಣ ಮಾಡಿದ್ದು, ಇದೇ ವಿಚಾರಕ್ಕೆ ಗಣಪತಿ ಮೆರವಣಿಗೆ ವೇಳೆ ಎರಡು ಕೋಮಿನ ನಡುವೆ ಕಲ್ಲು ತೂರಾಟ ನಡೆದಿದೆ.
ಈ ಘಟನೆಗೆ ಸತೀಶ್ ಪೂಜಾರಿ ಭಾಷಣ ಕಾರಣ ಎಂದು ಕೆಲವರು ಆರೋಪಿಸಿ ದೂರು ನೀಡಿದ್ದರು. ಹಾಗಾಗಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿದ್ದ ಸತೀಶ್ ಪೂಜಾರಿ ಸೇರಿ ಹಲವರನ್ನು ಬಸವನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಸತೀಶ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳನ್ನ ನ್ಯಾಯಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಸತೀಶ್ ಪೂಜಾರಿ ಅವರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ : ಮುನಿರತ್ನ ಬೆಂಬಲಿಗರಿಂದ ಸಂತ್ರಸ್ಥೆ ಮಗನಿಗೆ ಬೆದರಿಕೆ – MLA ಮುನಿರತ್ನ ವಿರುದ್ಧ ಮತ್ತೊಂದು FIR ದಾಖಲು..!
Post Views: 92