ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಬಣ ರಾಜಕಾರಣ ಜೋರಾಗಿದೆ. ಯತ್ನಾಳ್ ಹಾಗೂ ವಿಜಯೇಂದ್ರ ಬಣ ಗುದ್ದಾಟ ಪಕ್ಷದ ಸಂಘಟನೆಯ ಮೇಲೆ ತೀವ್ರ ಸ್ವರೂಪದಲ್ಲಿ ಪರಿಣಾಮ ಬೀರುತ್ತಿದೆ. ಇದೀಗ ಬಿಜೆಪಿ ಭಿನ್ನಮತ ಶಮನಕ್ಕೆ ಹೈಕಮಾಂಡ್ ಎಂಟ್ರಿ ಕೊಡಲಿದ್ದು, ಡಿಸೆಂಬರ್ 7ಕ್ಕೆ ದೆಹಲಿಯಿಂದ ಲೀಡರ್ಸ್ ಬರಲಿದ್ದಾರೆ.
ಯತ್ನಾಳ್ ಸೇರಿ ಹಲವರ ಭಿನ್ನಮತ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ತಲೆನೋವು ತಂದಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಪ್ರತ್ಯೇಕ ಟೀಂ ಮಾಡಿರುವ ಯತ್ನಾಳ್, ರಮೇಶ್ ಜಾರಕಿಹೊಳಿ ಸುಮಾರು 7-8 ನಾಯಕರು ವಿಜಯೇಂದ್ರ ವಿರುದ್ಧ ಸಮರ ಸಾರುತ್ತಿದ್ದಾರೆ.
ಹೀಗಾಗಿ ಅಧಿವೇಶನಕ್ಕೂ ಮುನ್ನ ಕೋರ್ ಕಮಿಟಿ ಸಭೆ ಮಾಡಲಿರುವ ಬಿಜೆಪಿ ನಾಯಕರು, ಭಿನ್ನಮತ ಶಮನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಸೇರಿ ಹಲವರು ಭೇಟಿ ನೀಡಿಲಿದ್ದು, ಡಿಸೆಂಬರ್ 7ರಂದು ಎರಡು ಟೀಂ ಜೊತೆ ಸಭೆ ಆಗುತ್ತಾ ಎಂಬುದನ್ನು ಕಾದುನೋಡಬೇಕಾಗಿದೆ.
ಇದನ್ನೂ ಓದಿ : ಪೆಟ್ರೋಲ್ ಸುರಿದು ಇಡೀ ಕುಟುಂಬದ ಹತ್ಯೆಗೆ ಯತ್ನ- ಕಲಬುರಗಿಯಲ್ಲಿ ತಪ್ಪಿದ ಭಾರಿ ದುರಂತ..!