Download Our App

Follow us

Home » ರಾಜಕೀಯ » ನಮ್ಮ ಬೆಂಬಲ ನಿಮಗಿದೆ ಧೈರ್ಯವಾಗಿರಿ – ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತ ಹೈಕಮಾಂಡ್..!

ನಮ್ಮ ಬೆಂಬಲ ನಿಮಗಿದೆ ಧೈರ್ಯವಾಗಿರಿ – ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತ ಹೈಕಮಾಂಡ್..!

ನವದೆಹಲಿ : ಮುಡಾ ಹಗರಣ ಸಂಬಂಧ ತನಿಖೆಯ ಭೀತಿ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಕಾಂಗ್ರೆಸ್ ಹೈಕಮಾಂಡ್ ನಿಂತಿದೆ. ನಿನ್ನೆ ದೆಹಲಿಗೆ ತೆರಳಿರುವ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಹೈಕಮಾಂಡ್ ಜೊತೆ ಚರ್ಚಿಸಿದ್ದಾರೆ. AICC ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ವಿಪಕ್ಷ ನಾಯಕ ರಾಹುಲ್​ ಗಾಂಧಿ, ಕೆ.ಸಿ ವೇಣುಗೋಪಾಲ್​, ಉಸ್ತುವಾರಿ ರಣದೀಪ್​​ ಸುರ್ಜೆವಾಲ ಜೊತೆ ಚರ್ಚೆ ಮಾಡಿದ್ದಾರೆ.

ಮುಡಾ ಕೇಸ್​ ಹಾಗೂ ಪ್ರಾಸಿಕ್ಯೂಷನ್​ ಬಗ್ಗೆ ಸಂಪೂರ್ಣ ಚರ್ಚೆ ನಡೆಸಿದ್ದು, ರಾಜ್ಯಪಾಲರ ಕಾನೂನು ಬಾಹಿರ ಕ್ರಮ ಎಂದು ಹೈಕಮಾಂಡ್​ ಚರ್ಚೆ ಮಾಡಿದೆ. ಈ ವೇಳೆ ಕಾಂಗ್ರೆಸ್​ ಹೈಕಮಾಂಡ್ ನಮ್ಮ ಬೆಂಬಲ ನಿಮಗಿದೆ ಧೈರ್ಯವಾಗಿರಿ ಎಂದಿದೆ. ಆತಂಕ ಇಲ್ಲದೆ ನಿರಾಳವಾಗಿರಿ, ತೀರ್ಪು ಏನೇ ಬಂದರೂ ಸಿದ್ದರಾಮಯ್ಯಗೆ ಬೆಂಬಲಿಸುತ್ತೇವೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಬಿಜೆಪಿ -ಜೆಡಿಎಸ್​ ವಿರುದ್ಧ ಸತತ 1 ತಿಂಗಳು ರಾಜ್ಯಾದ್ಯಂತ  ಹೋರಾಟ ಮಾಡಿ ಎಂದು ಹೈಕಮಾಂಡ್ ಸಲಹೆ ನೀಡಿದ್ದು, ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲೂ ಪ್ರತಿಭಟನೆಗೆ ಪ್ಲಾನ್​ ಮಾಡಿದ್ದಾರೆ. ಮನೆ ಮನೆಗೆ ರಾಜ್ಯಪಾಲರ ನಡೆ ಬಗ್ಗೆ ಮನವರಿಕೆ ಮಾಡಿ, ಸೆಪ್ಟೆಂಬರ್​ ಅಂತ್ಯದವರೆಗೆ ಪ್ರತಿಭಟನೆ ಮಾಡುವಂತೆ ರಾಹುಲ್​ ಸೂಚನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕಾನೂನು ಮೇಲೆ ನಂಬಿಕೆ ಇದೆ ಎಂದಿದ್ದಾರೆ.

ಇದನ್ನೂ ಓದಿ : 1494 ಕೋಟಿ ರೂ. ಹಣ ದುರುಪಯೋಗ ಆರೋಪ – ಸಿಎಂ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು..!

Leave a Comment

DG Ad

RELATED LATEST NEWS

Top Headlines

ಕಾಸ್ಟಿಂಗ್​​ ಕೌಚ್​ ಸುನಾಮಿ – ಇಂದು ಮಹಿಳಾ ಆಯೋಗದಿಂದ ಫಿಲ್ಮ್​​ ಚೇಂಬರ್​​ನಲ್ಲಿ ಮೆಗಾ ಮೀಟಿಂಗ್​..!

ಬೆಂಗಳೂರು : ಈಗಾಗಲೇ ಮಾಲಿವುಡ್‌ನಲ್ಲಿ ಹೇಮಾ ವರದಿ ಸುನಾಮಿ ಎಬ್ಬಿಸಿದ್ದು, ಕೇರಳದಲ್ಲಿ ಎದ್ದಿರೋ ಈ ಸುನಾಮಿ ಈಗ ಸ್ಯಾಂಡಲ್​ವುಡ್​​​ಗೂ ಬಂದಪ್ಪಳಿಸುವಂತಿದೆ. ಫಿಲ್ಮ್ ಚೇಂಬರ್‌ನಲ್ಲಿ ಇಂದು ಮೆಗಾ ಮೀಟಿಂಗ್

Live Cricket

Add Your Heading Text Here