Download Our App

Follow us

Home » ರಾಜಕೀಯ » ಇಬ್ಬರಿಗೆ ಗುಡ್​ನ್ಯೂಸ್​.. ಐವರಿಗೆ ಬ್ಯಾಡ್​ ನ್ಯೂಸ್ – ಸಚಿವ ಸಂಪುಟ ಪುನರ್​ ರಚನೆಗೆ ​ಹೈಕಮಾಂಡ್​ ಗ್ರೀನ್​ ಸಿಗ್ನಲ್..!

ಇಬ್ಬರಿಗೆ ಗುಡ್​ನ್ಯೂಸ್​.. ಐವರಿಗೆ ಬ್ಯಾಡ್​ ನ್ಯೂಸ್ – ಸಚಿವ ಸಂಪುಟ ಪುನರ್​ ರಚನೆಗೆ ​ಹೈಕಮಾಂಡ್​ ಗ್ರೀನ್​ ಸಿಗ್ನಲ್..!

ದೆಹಲಿ : ಕರ್ನಾಟಕದಲ್ಲಿ ನಡೆದ ಉಪ ಚುನಾವಣೆಯಲ್ಲಿ 3 ಕ್ಷೇತ್ರಗಳನ್ನು ಕಾಂಗ್ರೆಸ್ ಕ್ಲೀನ್​​ಸ್ವೀಪ್ ಮಾಡಿತ್ತು. ಭರ್ಜರಿ ಗೆಲುವು ದೊರೆಯುತ್ತಿದ್ದಂತೆಯೇ ರಾಜ್ಯ ಸಂಪುಟ ಪುನರ್ ರಚನೆಯ ಸುದ್ದಿ ಮುನ್ನೆಲೆಗೆ ಬಂದಿತ್ತು. ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎಂಬ ವದಂತಿಗಳೂ ಹರಿದಾಡಿದ್ದವು. ಇದೀಗ ಸಚಿವ ಸಂಪುಟ ಪುನರ್​ ರಚನೆಗೆ ​ಹೈಕಮಾಂಡ್​ ಗ್ರೀನ್​ ಸಿಗ್ನಲ್​ ಕೊಟ್ಟಿದೆ.

ಸಚಿವ ಸಂಪುಟ ಪುನರ್​ ರಚನೆಗೆ ಗ್ರೀನ್​ ಸಿಗ್ನಲ್ ಕೊಟ್ಟ ಹೈಕಮಾಂಡ್, ಬಿ.ಕೆ ಹರಿಪ್ರಸಾದ್​, ನಾಗೇಂದ್ರ ಸೇರ್ಪಡೆಗೆ ಅಸ್ತು ಅಂದಿದೆ ಎಂದು ಹೇಳಲಾಗುತ್ತಿದೆ. ಐವರನ್ನ ಕೈಬಿಡಲು ಹೈಕಮಾಂಡ್ ಸೂಚಿಸಿದೆ ಎಂಬುದು ತಿಳಿದು ಬಂದಿದೆ.

ಕಳಪೆ ಪ್ರದರ್ಶನ ಮಾಡಿರೋ ಸಚಿವರಿಗೆ ಕೊಕ್​ ಕೊಡಲು ನಿರ್ಧಾರ ಮಾಡಿರುವ ಹೈಕಮಾಂಡ್,  ಸರ್ಕಾರದ ಪರ ಸದಾ ನಿಲ್ಲುವ ಬಿ.ಕೆ ಹರಿಪ್ರಸಾದ್​, ವಾಲ್ಮೀಕಿ ಹಗರಣದಲ್ಲಿ ರಾಜೀನಾಮೆ ಕೊಟ್ಟಿದ್ದ ನಾಗೇಂದ್ರ  ಸೇರ್ಪಡೆಗೆ ಅಷ್ಟೇ ಅನುಮತಿ ಎನ್ನಲಾಗುತ್ತಿದೆ. ಇನ್ನು ಬೆಳಗಾವಿ ಅಧಿವೇಶನ ಬಳಿಕ ಸಂಪುಟ ಪುನರ್​ ರಚನೆ ಮಾಡಲಾಗುತ್ತದೆ.

ಇದನ್ನೂ ಓದಿ : ಪ್ರಧಾನಿ ಮೋದಿ ಭೇಟಿಯಾದ ಸಿದ್ದರಾಮಯ್ಯ – ಪ್ರಮುಖ ಯೋಜನೆಗಳ ಅನುಮೋದನೆಗೆ ಮನವಿ..!

 

 

 

Leave a Comment

DG Ad

RELATED LATEST NEWS

Top Headlines

ಸೈಕ್ಲೋನ್​ ಎಫೆಕ್ಟ್ – ಚಾಮುಂಡಿ ಬೆಟ್ಟದಲ್ಲಿ ಉರುಳಿದ ಬೃಹತ್ ಬಂಡೆ.. ಬಸ್​ ಜಸ್ಟ್​ ಮಿಸ್​..!

ಮೈಸೂರು : ನೈಋುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ತಲ್ಲಣ ಸೃಷ್ಟಿಸಿದ್ದ ‘ಫೆಂಗಲ್’ ಚಂಡಮಾರುತ ಇದೀಗ ಕರ್ನಾಟಕದ ಬಾಗಿಲಿಗೂ ಬಂದಿದೆ. ಸೈಕ್ಲೋನ್

Live Cricket

Add Your Heading Text Here