ಕೋಲಾರ : ಗಂಡ ಹಾಗೂ ಅವರ ಮನೆಯವರ ಕಿರುಕುಳದಿಂದ ಬೇಸತ್ತು ತನ್ನ ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾಯಿ ಕೂಡ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಕಮ್ಮಸಂದ್ರದಲ್ಲಿ ನಡೆದಿದೆ. ಮೌನೀಶ್(7), ನಿತಿನ್(4), ತಾಯಿ ತಿಪ್ಪಮ್ಮ(30) ಮೃತರು.
ನಿನ್ನೆ ತಾಯಿ ತಿಪ್ಪಮ್ಮನ ಮಗಳ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವಿತ್ತು. ಅಲ್ಲಿಗೆ ತನ್ನ ಅಜ್ಜಿ, ತಾತನೊಂದಿಗೆ ಹೋಗಿ ಬಂದಿದ್ದ ಮಗಳಿಗೆ ಊಟ ಮಾಡಿಸಿ, ತಾನು ಊಟ ಮಾಡಿ ಇಬ್ಬರೂ ಮಕ್ಕಳೊಂದಿಗೆ ಮಹಡಿ ಮನೆಯಲ್ಲಿ ಮಲಗಿದ್ದರು.
ಬೆಳಿಗ್ಗೆ ಎದ್ದು ನೋಡಿದರೆ ತಾಯಿ ತಿಪ್ಪಮ್ಮ ಮಲಗಿದ್ದ ಕೋಣೆಯ ಬಾಗಿಲು ತೆರೆದಿಲ್ಲ. ಈ ವೇಳೆ ಅಕ್ಕಪಕ್ಕದ ಮನೆಯವರನ್ನು ಕರೆದು ಬಾಗಿಲು ಒಡೆದು ನೋಡಿದ್ರೆ ತಿಪ್ಪಮ್ಮ ತಾನ್ನ ಮಕ್ಕಳಾದ ಮೌನಿಷ(7) ಹಾಗೂ ನಿತಿನ್ (4) ನೇಣು ಹಾಕಿ, ತಾನು ಕೂಡಾ ನೇಣಿಗೆ ಶರಣಾಗಿದ್ದರು. ಇನ್ನು ಈ ವಿಷಯ ತಿಳಿದು ಬೆಮೆಲ್ ನಗರ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.
ತಿಪ್ಪಮ್ಮನ ಪತಿ ಮಣಿ ಕುಡಿದು ಬಂದು ನಿತ್ಯ ಗಲಾಟೆ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಬೆಮೆಲ್ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತಿಪ್ಪಮ್ಮ ಪತಿ ಮಣಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಅಲ್ಲು ಅರ್ಜುನ್ಗೆ ಜಾತಕ ದೋಷ, ಕಾದಿದ್ಯಾ ಮತ್ತಷ್ಟು ಸಂಕಷ್ಟ? ಜ್ಯೋತಿಷಿ ವೇಣುಸ್ವಾಮಿ ಸ್ಫೋಟಕ ಭವಿಷ್ಯ!