ಬೆಂಗಳೂರು : ನಿತ್ಯ ವಾಕಿಂಗ್-ಜಾಗಿಂಗ್ ಮಾಡಿದರೆ ಅದುವೇ ಆರೋಗ್ಯಕರ ವ್ಯಾಯಾಮ ಎಂದು ಹೇಳಲಾಗುತ್ತದೆ. ಆದ್ರೆ ಸದ್ಯ ನಗರದಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗ್ತಿದ್ದು, ಶೀತ ವಾತವಾರಣ ನಿರ್ಮಾಣವಾಗಿದೆ. ಕನಿಷ್ಠ ಉಷ್ಣಾಂಷ 19ರಿಂದ 20 ಡಿಗ್ರಿ ಸೆಲ್ಸಿಯಸ್ ವರೆಗೂ ತಲುಪಿದೆ. ಹಾಗಾಗಿ ಚಳಿಗಾಲದಲ್ಲಿ ಬೆಳಗ್ಗೆ ಎದ್ದು ಜಾಗಿಂಗ್-ವಾಕಿಂಗ್ ಮಾಡಲು ಹೋಗೊ ಹಾರ್ಟ್ ಪೇಶೆಂಟ್ಗಳಿಗೆ ಎಚ್ಚರಿಕೆಯಿಂದ ಇರುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಚಳಿಯಿಂದ ರಕ್ಷಣೆ ಪಡೆಯದಿದ್ರೆ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿವೆ. ಚುಮು ಚುಮು ಚಳಿಗೆ ವಾಕ್ ಮಾಡೋ ಹೃದಯ ಸಂಬಂಧಿಗಳಿಗೆ ಕಂಟಕ ಎದುರಾಗಲಿದೆ. ಏಕಾಏಕಿ ಚಳಿಯಲ್ಲಿ ಓಡಾಡಿದ್ರೆ ಹಾರ್ಟ್ ಅಟ್ಯಾಕ್ ಆಗೋ ಸಾಧ್ಯತೆಯಿದೆ. ಚಳಿಯ ತೀವ್ರತೆಗೆ, ವಾಕಿಂಗ್ನಿಂದ ಎದೆಬಡಿತ ಹೆಚ್ಚಳವಾಗಿ ರಕ್ತಸಂಚಲನ ಏರು ಪೇರಾಗೋದ್ರಿಂದ ಪ್ರಾಣಕ್ಕೆ ಅಪಾಯ ಎದುರಾಗೋ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆ ಇರೋರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುವ ಸಾಧ್ಯತೆಯಿದ್ದು, ಅತಿಯಾದ ಚಳಿಯಲ್ಲಿ ಹೃದ್ರೋಗಿಗಳು ಆದಷ್ಟೂ ವಾಕಿಂಗ್, ಜಾಗಿಂಗ್ ಮಾಡುವುದಕ್ಕೆ ಬ್ರೇಕ್ ಹಾಕುವುದು ಒಳ್ಳೆಯದು. ಹೃದಯಕ್ಕೆ ಒತ್ತಡ ಆಗದಂತೆ ಮನೆಯಲ್ಲೇ ವ್ಯಾಯಾಮ ಮಾಡಬೇಕು. ಅದರಲ್ಲೂ 45 ವರ್ಷ ಮೇಲ್ಪಟವರು ವಾಕಿಂಗ್ ಮಾಡುವುದು ಒಳ್ಳೆಯದಲ್ಲ ಎಂದು ವೈದ್ಯರ ಸಲಹೆ ನೀಡಿದ್ದಾರೆ. ಇನ್ನು ಹೃದ್ರೋಗಿಗಳು ವ್ಯಾಯಾಮಕ್ಕಿಳಿಯುವ ಮೊದಲು ವೈದ್ಯರ ಸಲಹೆ ಪಡೆದು, ಅದರಂತೆ ದಿನಚರಿ ರೂಢಿಸಿಕೊಳ್ಳಿ.
ಇದನ್ನೂ ಓದಿ : ಕರ್ನಾಟಕದಲ್ಲಿ ಫೆಂಗಲ್ ಆರ್ಭಟ.. ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ..!