Download Our App

Follow us

Home » ರಾಜಕೀಯ » ಮಂಡ್ಯ ಕ್ಷೇತ್ರದಲ್ಲಿ ಹೆಚ್​ಡಿಕೆ ವಿರುದ್ಧ ಅಖಾಡಕ್ಕೆ ಇಳಿದ ಹೆಚ್​.ಡಿ ರೇವಣ್ಣ..!

ಮಂಡ್ಯ ಕ್ಷೇತ್ರದಲ್ಲಿ ಹೆಚ್​ಡಿಕೆ ವಿರುದ್ಧ ಅಖಾಡಕ್ಕೆ ಇಳಿದ ಹೆಚ್​.ಡಿ ರೇವಣ್ಣ..!

ಮಂಡ್ಯ : ಮಂಡ್ಯದಲ್ಲಿ ಲೋಕಸಭಾ ಚುನಾವಣಾ ಅಖಾಡ ರಂಗೇರಿದ್ದು, ಜೆಡಿಎಸ್​​ನ ಪ್ರಬಲ ಅಭ್ಯರ್ಥಿ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ ಹೆಚ್​.ಡಿ.ರೇವಣ್ಣ ಅಖಾಡಕ್ಕೆ ಇಳಿದಿದ್ದಾರೆ.

ಹೆಚ್​.ಡಿ.ರೇವಣ್ಣ ಅವರು ಇಂದು ಮಂಡ್ಯ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಹೆಚ್​.ಡಿ.ರೇವಣ್ಣನವ್ರು ಹೆಚ್​ಡಿಕೆ ಅಣ್ಣ ಅಂದುಕೊಂಡ್ರಾ..? ಅಲ್ಲಾ.. ಮಂಡ್ಯದಲ್ಲಿ ಕಣಕ್ಕಿಳಿದ ಎಚ್​ಡಿ ರೇವಣ್ಣ ಬೇರೆ. ಹೌದು.. ಹಾಸನ ಮೂಲದ ಹೆಚ್​.ಡಿ.ರೇವಣ್ಣ ಎಂಬ ಹೆಸರಿನ ವ್ಯಕ್ತಿಯೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುವ ಕರ್ನಾಟಕದ 14 ಕ್ಷೇತ್ರಗಳಿಗೆ ಇಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿತ್ತು. ಹೀಗಾಗಿ ಮೊದಲ 14 ಕ್ಷೇತ್ರಗಳ ಅಭ್ಯರ್ಥಿಗಳಿವತ್ತು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇವರ ವಿರುದ್ಧ ಚನ್ನರಾಯಪಟ್ಟಣ ಮೂಲದ ಕೋಡಿಹಳ್ಳಿ ಗ್ರಾಮದ HD ರೇವಣ್ಣ ಎಂಬವರು ಕಣಕ್ಕಿಳಿದಿದ್ದಾರೆ. ಇವರು ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯಿಂದ ಸ್ಪರ್ಧೆ ಮಾಡುತ್ತಿದ್ದು, HD ರೇವಣ್ಣ 2 ಲಕ್ಷ ನಗದು ಸೇರಿ 6 ಲಕ್ಷದ ಆಸ್ತಿ ಘೋಷಿಸಿಕೊಂಡಿದ್ದಾರೆ.

ಹೆಚ್​ಡಿಕೆ ನಾಮಪತ್ರ ಸಲ್ಲಿಸಿದ ದಿನವೇ ಕೋಡಿಹಳ್ಳಿಯ ದೊಡ್ಡೇಗೌಡರ ಪುತ್ರ ಹೆಚ್​.ಡಿ.ರೇವಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಹಾಗಾಗಿ ಎಚ್​.ಡಿ ರೇವಣ್ಣ ಸ್ಪರ್ಧೆ ರಾಜಕೀಯ ತಂತ್ರವೋ.. ಕಾಕತಾಳೀಯವೋ..? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ : ಹನುಮಾನ್​​ ಚಾಲೀಸಾ ಕೇಸ್​ಗೆ ಬಿಗ್​ ಟ್ವಿಸ್ಟ್​ : ಹಲ್ಲೆಗೊಳಗಾಗಿದ್ದ ಮುಖೇಶ್​ ಮೇಲೆಯೇ FIR ದಾಖಲು..!

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here