ನವದೆಹಲಿ : ಮುಂದಿನ ವಾರದಲ್ಲೇ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ವಿಸ್ತರಣೆ ವೇಳೆ ಕರ್ನಾಟಕದಿಂದ ದೋಸ್ತಿ ಜೆಡಿಎಸ್ಗೆ ಚಾನ್ಸ್ ಸಿಗಲಿದೆ.
ಪಾರ್ಲಿಮೆಂಟ್ ಎಲೆಕ್ಷನ್ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಪ್ಲಾನ್ ಮಾಡಿದೆ. ಕರ್ನಾಟಕ, ರಾಜಸ್ಥಾನ ಸೇರಿದಂತೆ 6 ರಾಜ್ಯಗಳಿಗೆ ಮಂತ್ರಿ ಭಾಗ್ಯ ದೊರಕಲಿದೆ. ಕರ್ನಾಟಕದಿಂದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಸ್ಥಾನ ಸಿಗಲಿದ್ದು, ಕುಮಾರಸ್ವಾಮಿಗೆ ರೈಲ್ವೆ ಖಾತೆ ಅಥವಾ ಕೃಷಿ ಖಾತೆ ಸಿಗೋ ಸಾಧ್ಯತೆಯಿದೆ.
ಕರ್ನಾಟಕದಲ್ಲಿ ಕನಿಷ್ಠ 25 ಸ್ಥಾನ ಗೆಲ್ಲೋಕೆ ಬಿಜೆಪಿ ವರಿಷ್ಠರು ತಂತ್ರ ಹೂಡಿದ್ದಾರೆ. ಕುಮಾರಸ್ವಾಮಿಗೆ ಕೇಂದ್ರ ಮಂತ್ರಿಗಿರಿ ಕೊಟ್ಟರೆ ಒಕ್ಕಲಿಗರು ಬಿಜೆಪಿ ಕಡೆಗೆ ಸೆಳೆಯಬಹುದಾಗಿದೆ. ಪ್ರಮುಖವಾಗಿ ಮೈಸೂರು ಕರ್ನಾಟಕ ಭಾಗದ ವೋಟ್ಬ್ಯಾಂಕ್ ಗುರಿಯಾಗಿಸಿಕೊಂಡಿದ್ದಾರೆ.
ಒಕ್ಕಲಿಗ ಮತಬ್ಯಾಂಕ್ ಜೊತೆಗೆ JDS ಸಾಂಪ್ರದಾಯಿಕ ಮತಗಳೇ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ಗೆಲ್ಲೋಕೆ ದೋಸ್ತಿ ಜೆಡಿಎಸ್ ಜೊತೆ ಪ್ರಯೋಗ ನಡೆಸಿದ್ದಾರೆ. ಕುಮಾರಸ್ವಾಮಿ ಬ್ರಹ್ಮಾಸ್ತ್ರ ಮೂಲಕ ಲೋಕಸಭೆಗೆ ಬಿಜೆಪಿ ಬಿಗ್ ಗೇಮ್ ಮಾಡಿಕೊಂಡಿದೆ.
ಇದನ್ನೂ ಓದಿ : ಶಿವರಾಜ್ಕುಮಾರ್ ಅಭಿನಯದ, ದಿನಕರ್ ತೂಗುದೀಪ ನಿರ್ದೇಶನದ ನೂತನ ಚಿತ್ರದ ಪೋಸ್ಟರ್ ರಿಲೀಸ್..