Download Our App

Follow us

Home » ರಾಜಕೀಯ » ಈ ಸರ್ಕಾರ ತೆಗೆವವರೆಗೆ ನಾನು ಕೊನೆಯುಸಿರೆಳೆಯಲ್ಲ – ಹೆಚ್​​ಡಿ ದೇವೇಗೌಡ..!

ಈ ಸರ್ಕಾರ ತೆಗೆವವರೆಗೆ ನಾನು ಕೊನೆಯುಸಿರೆಳೆಯಲ್ಲ – ಹೆಚ್​​ಡಿ ದೇವೇಗೌಡ..!

ಚನ್ನಪಟ್ಟಣ : ಈ ಸರ್ಕಾರ ತೆಗೆವವರೆಗೆ ನಾನು ಕೊನೆಯುಸಿರೆಳೆಯಲ್ಲ, ನಿಖಿಲ್​​ ಗೆಲ್ಲಿಸಿ ನಾನು ಮನೆ ಸೇರುವುದಿಲ್ಲ. ಕೊತ್ವಾಲ್​ ಬಳಿ 100 ರೂಪಾಯಿಗೆ ಕೆಲಸ ಮಾಡಿದ್ದ ಡಿಕೆಶಿ ಕಣ್ಣೀರು ಹಾಕಿದ್ದಾರಾ? ದೇಶಕ್ಕೆ ಅನ್ನ ನೀಡುವ ರೈತರಿಗೆ ನೋವಾದರೆ ನಮ್ಮ ಹೃದಯ ಮರಗುತ್ತೆ ಎಂದು ಹೆಚ್​​ಡಿ ದೇವೇಗೌಡರು ಹೇಳಿದ್ದಾರೆ.

ಈ ಬಗ್ಗೆ ಚನ್ನಪಟ್ಟಣದಲ್ಲಿ ಹೆಚ್​​ಡಿ ದೇವೇಗೌಡರು ಮಾತನಾಡಿ, ನಮ್ಮ ವಂಶನೇ ಕಣ್ಣೀರು ಹಾಕುತ್ತೆ, ಜೆಡಿಎಸ್​​​​​ನವರು ಅತ್ತರೆ ಅಳಲಿ, ಕುಣಿದರೆ ಕುಣಿಯಲಿ. ನಮ್ಮ ಪಾಡಿಗೆ ನಾವಿರೋಣ ಎಂದು ಡಿ.ಕೆ.ಶಿವಕುಮಾರ್​ಗೆ​​​​ ಕೌಂಟರ್​​ ಕೊಟ್ಟಿದ್ದಾರೆ.

ಒಬ್ಬ ಕಾರ್ಯಕರ್ತರಿಗೆ ಅಧಿಕಾರ ಕೊಟ್ಟಿದ್ದಾರಾ? ಗೌಡರ ಜಮೀನು ಬಗ್ಗೆ ನಾನು ಈಗ ಮಾತಾಡೋಲ್ಲ. ಯೋಗೇಶ್ವರ್​​​​​ ಕ್ಷೇತ್ರದಲ್ಲಿ ನಿರಾವರಿ ಯೋಜನೆ ಜಾರಿಗೊಳಿಸಿ ರೈತರಿಗೆ ನೆರವಾಗಿದ್ದಾರೆ. ಇಂತಹ ಒಂದೇ ಒಂದು ಕಾರ್ಯಕ್ರಮವನ್ನು ನೀವು ಮಾಡಿದ್ದೀರಾ? ಕ್ಷೇತ್ರಕ್ಕೆ ಇಂತಹ ಕಾರ್ಯಕ್ರಮ ಮಾಡಿದ್ದೀನಿ ಅಂತಾ ಹೇಳಿ ಈಗ್ಲೇ ಹೊರಟು ಹೋಗ್ತೇನೆ ಎಂದು ಹೆಚ್​​ಡಿ ದೇವೇಗೌಡರು ಹೇಳಿದ್ದಾರೆ.

ಇದನ್ನೂ ಓದಿ : ಕೋವಿಡ್​ ಹಗರಣ : ಮಾಜಿ ಸಿಎಂ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್​ಗೆ ಶಿಫಾರಸ್ಸು..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here