ಹಾವೇರಿ : ದೇವರಿಗೆ ಹಚ್ಚಿದ ದೀಪದಿಂದ ಎರಡು ಮನೆಗೆ ಬೆಂಕಿ ತಗುಲಿ ಧಗಧಗನೆ ಹೊತ್ತಿ ಉರಿದಿರುವ ಘಟನೆ ರಾಣೆಬೇನ್ನೂರು ತಾಲೂಕಿನ ದೇವಗೊಂಡನಕಟ್ಟಿಯಲ್ಲಿ ನಡೆದಿದೆ.
ದೇವರ ಮನೆಯಲ್ಲಿ ದೀಪ ಹಚ್ಚಿ ಕುಟುಂಬಸ್ಥರು ಯಲ್ಲಮ್ಮನ ಗುಡ್ಡಕ್ಕೆ ದೇವರ ದರ್ಶನಕ್ಕೆ ತೆರೆಳಿದ್ದರು. ಆ ಸಂದರ್ಭದಲ್ಲಿ ಎರಡು ಮನೆಗೆ ಬೆಂಕಿ ಹತ್ತಿ ಲಕ್ಷಾಂತರ ಮೌಲ್ಯದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ ವೇಳೆ ಅವಘಡ ನಡೆದಿದ್ದು, ಗ್ರಾಮದ ಮಹಾಂತೇಶ ತ್ತು ಶಿವನಗೌಡ್ರು ಎಂಬುವವರಿಗೆ ಸೇರಿದ ಮನೆಯಾಗಿದೆ. ಮನೆಯಲ್ಲಿ ಬೆಕ್ಕು ಅಥವಾ ಇಲಿಗಳು ದೇವರಿಗೆ ಹಚ್ಚಿದ ದೀಪ ಎಳೆದು ಬೆಂಕಿ ತಗುಲಿಸಿರುವ ಬಗ್ಗೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಪ್ಯಾನ್ ಇಂಡಿಯಾ “ಬರೋಜ್” ಸಿನಿಮಾದ ಕನ್ನಡ ಟ್ರೇಲರ್ ರಿಲೀಸ್ – ಡಿ.25ಕ್ಕೆ ಚಿತ್ರ ತೆರೆಗೆ..!
Post Views: 235