ಹಾವೇರಿ : ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆಯಾದ ಘಟನೆ ನಡೆದಿದ್ದು, ಪರಿಣಾಮ ರೋಗಿಗಳು ಹಾಗೂ ಸಂಬಂಧಿಕರು ಆಸ್ಪತ್ರೆಯಿಂದ ಹೊರಗೆ ಭಯದಿಂದ ಓಡಿ ಬಂದಿದ್ದಾರೆ.
ಆಸ್ಪತ್ರೆಯಲ್ಲಿ 300ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಜೀವಭಯದಲ್ಲೇ ಆಸ್ಪತ್ರೆಯಿಂದ ಜನರು ಹೊರಗೆ ಓಡೋಡಿ ಬಂದಿದ್ದಾರೆ.
ಆತಂಕಗೊಂಡ ರೋಗಿಗಳು ಬೆಡ್ ಮೇಲಿಂದ ಎದ್ದು ಸಂಬಂಧಿಕರ ಸಮೇತ ಹೊರಗೆ ಬಂದಿದ್ದಾರೆ. ಕೆಲವರು ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳನ್ನು ಎತ್ತಿಕೊಂಡು ಹೊರಗೆ ಬಂದಿದ್ದು, ಕೆಲ ನಿಮಿಷಗಳಲ್ಲಿ ಜಿಲ್ಲಾಸ್ಪತ್ರೆಯ ಎದುರಿನ ರಸ್ತೆ, ರೋಗಿಗಳು ಹಾಗೂ ಸಂಬಂಧಿಕರಿಂದ ತುಂಬಿತ್ತು.
ಆಕ್ಸಿಜನ್ ಸೋರಿಕೆಯಾಗಿದ್ದರಿಂದ ಬಾಣಂತಿಯರು, ಅಪಘಾತದಲ್ಲಿ ಗಾಯಗೊಂಡವರು, ಜ್ವರ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರು ಹೊರಗೆ ಓಡಿ ಬಂದು ರಸ್ತೆಯಲ್ಲಿ ನಿಲ್ಲುವ ಪರಿಸ್ಥಿತಿ ಬಂದೊದಗಿತ್ತು. ಕೆಲವರು ಗ್ಲೂಕೋಸ್, ಸಲಾಯನ್ ಬಾಟಲಿ ಸಮೇತವೇ ಹೊರಗೆ ಓಡಿ ಬಂದಿದ್ದರು. ಆಸ್ಪತ್ರೆಯಲ್ಲಿ ಸುಮಾರು ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಇದನ್ನೂ ಓದಿ : ಹಾವೇರಿಯಲ್ಲಿ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು..!