ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ಬಾಸ್ ಸೀಸನ್ 11’ರ ಸ್ಪರ್ಧಿ ಹನುಮಂತ ಅವರು ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡುತ್ತಿರೋ ಮೊದಲ ಸ್ಪರ್ಧಿಯಾಗಿದ್ದಾರೆ. ಇನ್ನೇನು ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಗೆ ಮೂರು ವಾರಗಳು ಬಾಕಿ ಇರುವ ಹೊತ್ತಲ್ಲೇ ಹಳ್ಳಿ ಹೈದ ಹನುಮಂತ ಟಿಕೆಟ್ ಟು ಫಿನಾಲೆ ಪಾಸ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇಷ್ಟು ದಿನ ಬಿಗ್ಬಾಸ್ ಮನೆಯಲ್ಲಿ ಹಾಡು ಹಾಡುತ್ತಲ್ಲೇ ಸ್ಪರ್ಧಿಗಳಿಗೆ ಟಾಂಗ್ ಕೊಡುತ್ತಿದ್ದ ಹನುಮಂತ ಈಗ ಮಸ್ತ್ ಆಗಿ ಆಟ ಆಡುವ ಮೂಲಕ ಮತ್ತೆ ದಾಖಲೆ ನಿರ್ಮಿಸಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಬಂದ ಹನುಮಂತ ಉತ್ತಮವಾಗಿ ಆಟ ಆಡುತ್ತಿದ್ದರು. ಹನುಮಂತನ ತುಂಟಾಟ, ಟಾಸ್ಕ್ ಆಡುವ ಶೈಲಿಗೆ ಎಲ್ಲರೂ ಫಿದಾ ಆಗಿದ್ದರು. ಇನ್ನು ಬಿಗ್ಬಾಸ್ಗೆ ಬರುತ್ತಿದ್ದಂತೆ ಕ್ಯಾಪ್ಟನ್ ಪಟ್ಟ ಗಿಟ್ಟಿಸಿಕೊಂಡಿದ್ದ ಹನುಮಂತ, ಇದೀಗ ಮತ್ತೆ ಫಿನಾಲೆ ವಾರದ ಕೊನೆಯಲ್ಲಿ ದೊಡ್ಮನೆ ಕಟ್ಟ ಕಡೆಯ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದಾರೆ.
ಹೌದು, ಬಿಗ್ಬಾಸ್ ಟಿಕೆಟ್ ಟು ಫಿನಾಲೆ ಟಾಸ್ಕ್ಗೆ ಭವ್ಯಾ ಗೌಡ, ರಜತ್, ತ್ರಿವಿಕ್ರಮ್ ಹಾಗೂ ಹನುಮಂತ ಸೆಲೆಕ್ಟ್ ಆಗಿದ್ದರು. ಹೀಗಾಗಿ ಈ ನಾಲ್ಕು ಸ್ಪರ್ಧಿಗಳಿಗೆ ಬಿಗ್ಬಾಸ್ ಟ್ರಂಕ್ನಲ್ಲಿರುವ ಬಾವುಟ ಇರುವ ಸ್ಟಿಕ್ ತೆಗೆದುಕೊಂಡು ಹಗ್ಗಗಳಿಂದ ಮಾಡಿದ ಬಲೆಯನ್ನು ಹಿಡಿದು ಮೇಲಕ್ಕೆ ಏರಬೇಕಿತ್ತು. ಬಳಿಕ ಅಲ್ಲಿ ಹೋಗಿ ಬಾವುಟದ ಸ್ಟಿಕ್ ಇಟ್ಟು ಬಿಗ್ಬಾಸ್ ಎಂದು ಕೂಗಿ ಹೇಳಬೇಕು. ಈ ಟಾಸ್ಕ್ ಅನ್ನು ಸ್ಪರ್ಧಿಗಳು ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕಿತ್ತು. ಹನುಮಂತ 2 ನಿಮಿಷ 27 ಸೆಕೆಂಡ್ನಲ್ಲಿ ಟಾಸ್ಕ್ ಪೂರ್ಣಗೊಳಿಸಿ ಗೆಲುವುವಿನೊಂದಿಗೆ ಟಿಕೆಟ್ ಟು ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ಬಾಸ್ ಮನೆಗೆ ಅತಿಥಿಯಾಗಿ ಆಗಮಿಸಿರುವ ಅದಿತಿ ಹಾಗೂ ಚರಣ್ ಅವರು ನೇರವಾಗಿ ಫಿನಾಲೆಗೆ ಹೋಗುವಂತ ಒಬ್ಬ ಸ್ಪರ್ಧಿ ಹನುಮಂತ ಹೆಸರನ್ನು ಘೋಷಣೆ ಮಾಡಿದ್ದಾರೆ. ಈ ಹೆಸರನ್ನು ಹೇಳುತ್ತಿದ್ದಂತೆ ಉಳಿದ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಇನ್ನು ಇಷ್ಟು ದಿನ ಸೈಲೆಂಟ್ ಆಗಿದ್ದ ಹನುಮಂತ ಏಕಾಏಕಿ ವೈಲೆಂಟ್ ಆಗಿ ಟಾಸ್ಕ್ನಲ್ಲಿ ಭಾಗವಹಿಸಿ ತನ್ನ ಬಲ ಪ್ರದರ್ಶನ ಕೊಟ್ಟಿದ್ದಾರೆ. ಮನರಂಜನೆ, ಟಾಸ್ಕ್, ಮಾತು ಎಲ್ಲರದಲ್ಲೂ ಫ್ಲಸ್ ಆಗಿರೋ ಹನುಮಂತ ಬಿಗ್ಬಾಸ್ ಟ್ರೋಫಿ ಗೆಲ್ಲುತ್ತಾರಾ ಅಂತ ಕಾದು ನೋಡಬೇಕಿದೆ.
ಇದನ್ನೂ ಓದಿ : ಪ್ರಯಾಣಿಕರಿಗೆ ಗುಡ್ನ್ಯೂಸ್ : ಇನ್ಮುಂದೆ ಪ್ರತಿ ಸೋಮವಾರ ಬೆಳಗ್ಗೆ 4:15ರಿಂದಲೇ ‘ನಮ್ಮ ಮೆಟ್ರೋ’ ಸೇವೆ ಆರಂಭ!