ಬೆಂಗಳೂರು : ‘ಮಠ’, ‘ಎದ್ದೇಳು ಮಂಜುನಾಥ’ ಅಂಥಹಾ ಕೆಲ ಕ್ಲಾಸಿಕ್ ಸಿನಿಮಾಗಳನ್ನು ನೀಡಿರುವ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಅವರ ಮೃತದೇಹ ನಗರದ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ ಒಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಗುರುಪ್ರಸಾದ್ ಅವರು ಬೆಳ್ಳಿ ತೆರೆಯ ಮೇಲೆ “ಮಠ” ಸಿನಿಮಾ ಮೂಲಕ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದರು. ಅದೇ ರೀತಿಯ “ಎದ್ದೇಳು ಮಂಜುನಾಥ” ಸಿನಿಮಾ ಮಾಡಿಯೂ ಕೂಡ ಗೆದ್ದಿದ್ದರು. ಬೆಳ್ಳಿ ತೆರೆಯ ಮೇಲೆ ಗುರುತಿಸಿಕೊಂಡಷ್ಟೇ ನಿರ್ದೇಶಕ ಗುರುಪ್ರಸಾದ್ ಕಿರು ತೆರೆಯಲ್ಲಿಯೂ ಕೂಡ ಗುರುತಿಸಿಕೊಂಡಿದ್ದರು.
ಕಿರುತೆರೆಯ ಒಟ್ಟು ನಾಲ್ಕು ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಗುರುತಿಸಿಕೊಂಡಿದ್ದರು ಗುರುಪ್ರಸಾದ್, ಬಿಗ್ಬಾಸ್ ಸ್ಪರ್ಧಿ ಕೂಡ ಆಗಿದ್ರು. ತಕಧಿಮಿಥಾ ಡ್ಯಾನ್ಸಿಂಗ್ ಸ್ಟಾರ್, ಪುಟಾಣಿ ಪಂಟ್ರು ಸೀಸನ್ 2 ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಭರ್ಜರಿ ಕಾಮಿಡಿ ಶೋಗಳಿಗೆ ಗುರುಪ್ರಸಾದ್ ತೀರ್ಪುಗಾರರ ಕುರ್ಚಿಯಲ್ಲಿ ಕುಳಿತುಕೊಂಡಿದ್ದರು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲೂ ಗುರುಪ್ರಸಾದ್ ತೆರೆಯ ಹಿಂದೆ ಕೆಲಸ ಮಾಡಿದ್ದರು. ಪುನೀತ್ ರಾಜ್ಕುಮಾರ್ ಅವರಿಗೆ ಟಾಕ್ ಬ್ಯಾಕ್ ನೀಡುತ್ತಿದ್ದರು.
ನಟನಾಗಿಯೂ ಖ್ಯಾತಿ ಗಳಿಸಿದ್ದ ಡೈರೆಕ್ಟರ್ ಗುರುಪ್ರಸಾದ್ ಅವರಿಗೆ ಜಗ್ಗೇಶ್ ಅವರ ಮಠ ಸಿನಿಮಾದ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಅವಕಾಶ ಬಂದಿದ್ದವು. ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡ ಗುರುಪ್ರಸಾದ್ ಅವರು ನಟನೆ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಹೀಗಾಗಿಯೇ ಅವರು ಕನ್ನಡದ ಎದ್ದೇಳು ಮಂಜುನಾಥ, ಮೈಲಾರಿ, ಕಳ್ ಮಂಜ, ಹುಡುಗರು, ಡೈರೆಕ್ಟರ್ ಸ್ಪೆಷಲ್, ವಿಶಲ್, ಕರೋಡ್ಪತಿ, ಜಿಗರ್ ಥಂಡಾ, ಅನಂತು ವರ್ಸಸ್ ನುಸ್ರತ್, ಕುಷ್ಕಾ, ಬಡವ ರಾಸ್ಕಲ್, ಬಾಡಿ ಗಾರ್ಡ್ ಸೇರಿ ಇನ್ನು ಕೆಲ ಚಿತ್ರಗಳಲ್ಲಿ ನಟನಾಗಿ ಅಭಿನಯ ಮಾಡಿದ್ದರು. ಇನ್ನು 2010ರಲ್ಲಿ ಎದ್ದೇಳು ಮಂಜುನಾಥ ಸಿನಿಮಾಗೆ ಬೆಸ್ಟ್ ಡೈರೆಕ್ಟರ್ ಫಿಲ್ಮಫೇರ್ ಗೌರವ ಕೂಡ ಗುರುಪ್ರಸಾದ್ರನ್ನ ಅರಸಿ ಬಂದಿತ್ತು.
ಇದನ್ನೂ ಓದಿ : ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ.. ಸಾಲಬಾಧೆ ತಾಳಲಾರದೇ ಈ ನಿರ್ಧಾರ ಮಾಡಿದ್ರಾ?