ಬೆಂಗಳೂರು : ‘ಡಿಸೆಂಬರ್ 5 ಜೆಡಿಎಸ್ಗೆ ದೊಡ್ಡ ಆಘಾತ’ ಎಂದು ಸಾಮಾಜಿಕ ಜಾಲತಾಣದಲ್ಲಿ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಪೋಸ್ಟ್ ಹಾಕಿದ್ದಾರೆ. ಹಾಸನದಲ್ಲಿ ಅಹಿಂದ ಬೃಹತ್ ಸಮಾವೇಶಕ್ಕೆ ತಯಾರಿ ನಡೆಯುತ್ತಿದೆ. ಇದೀಗ ಶಾಸಕ ಎಸ್ ಆರ್ ಶ್ರೀನಿವಾಸ್ ಪೋಸ್ಟ್ ಹಾಕಿರುವ ಹಿನ್ನೆಲೆ ಅಹಿಂದ ಸಮಾವೇಶದ ದಿನವೇ ಜೆಡಿಎಸ್ಗೆ ಸಂಕಷ್ಟ ಕಾದಿದ್ಯಾ ಅನ್ನೊ ಆತಂಕ ಶುರುವಾಗಿದೆ.
ಶಾಸಕ ಎಸ್.ಆರ್ ಶ್ರೀನಿವಾಸ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ‘ಡಿಸೆಂಬರ್ 5 ಜೆಡಿಎಸ್ಗೆ ದೊಡ್ಡ ಆಘಾತ’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಜೆಡಿಎಸ್ ಬಿಟ್ಟು ಕಾಂಗ್ರೆಸ್ಗೆ ಸೇರ್ಪಡೆಯಾಗಿರೊ MLA ಎಸ್.ಆರ್ ಶ್ರೀನಿವಾಸ್ ಪೋಸ್ಟ್ ಈಗ ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಜೆಡಿಎಸ್ 12 ಶಾಸಕರು ಅಂದೇ ಪಕ್ಷ ಬಿಟ್ಟು ಹೋಗ್ತರಾ..? ಜೆಡಿಎಸ್ ಬಿಟ್ಟು ಹೋಗಿ ಕಾಂಗ್ರೆಸ್ ಸೇರ್ಪಡೆ ಆಗ್ತರಾ..? ಅನ್ನೊ ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ : ಮಂಡ್ಯ ಅಬಕಾರಿ ಡಿಸಿ, ಇನ್ಸ್ಪೆಕ್ಟರ್ ಲಂಚ ಬೇಡಿಕೆ ಪ್ರಕರಣ – ಸಚಿವ ಚಲುವರಾಯಸ್ವಾಮಿಗೆ ಸಂಕಷ್ಟ..!