ದೆಹಲಿ : ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಪರ ಸ್ವಾಭಿಮಾನಿ ಸಮಾವೇಶ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಚಿವರು, ಶಾಸಕರು ಅಭಿಮಾನಿಗಳು ಸೇರಿ ಡಿಸೆಂಬರ್ 5ರಂದು ಸ್ವಾಭಿಮಾನಿ ಸಮಾವೇಶ ಆಯೋಜಿಸಿದ್ದಾರೆ. ಈ ಸ್ವಾಭಿಮಾನಿ ಸಮಾವೇಶಕ್ಕೆ ಕೆಲ ಕಾಂಗ್ರೆಸ್ಸಿಗರು ಕ್ಯಾತೆ ತೆಗೆದಿದ್ದರು. ಇದೀಗ ಸಿಎಂ ಸ್ವಾಭಿಮಾನಿ ಸಮಾವೇಶಕ್ಕೆ ಹೈಕಮಾಂಡ್ನಿಂದಲೇ ಗ್ರೀನ್ ಸಿಗ್ನಲ್ ಸಿಕ್ಕಿದೆ.
5 ವರ್ಷ ನೀವೇ ಸಿಎಂ, ಎಷ್ಟು ಸಮಾವೇಶ ಬೇಕಿದ್ರೂ ಮಾಡಿ, ನೀವು ಎಲ್ಲಿ, ಹೇಗೆ ಬೇಕಾದ್ರೂ ಸಮಾವೇಶ ಮಾಡಿ. ನಿಮ್ಮಿಂದಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರೋದು, ನಿಮ್ಮ ಆಡಳಿತಕ್ಕೆ ಹೈಕಮಾಂಡ್ನಿಂದ ಸಂಪೂರ್ಣ ಬೆಂಬಲ ಇದೆ. ನೀವು ಯಾವುದಕ್ಕೂ ತಲೆ ಕೆಡಿಸ್ಕೋಬೇಡಿ, ಯಾರ ವಿರೋಧಕ್ಕೂ ನೀವು ತಲೆಕೆಡಿಸ್ಕೊಳ್ಳೋ ಅಗತ್ಯವಿಲ್ಲ, ಕರ್ನಾಟಕದಲ್ಲಿ ನೀವು ಯಾವ ನಿರ್ಧಾರ ಬೇಕಿದ್ರೂ ತೆಗೆದುಕೊಳ್ಳಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ದೆಹಲಿಯ ಸಂಸತ್ ಕಚೇರಿಯಲ್ಲಿ ಭೇಟಿಯಾದ ಸಿಎಂ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಅಭಯ ನೀಡಿದ್ದಾರೆ. ಭೇಟಿ ವೇಳೆ ಸಿದ್ದರಾಮಯ್ಯ ಹಾಸನ ಸಮಾವೇಶದ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಜೆಡಿಎಸ್ ಭದ್ರಕೋಟೆಯಲ್ಲೇ ನುಗ್ಗಿ ಸಮಾವೇಶ ಮಾಡ್ತಿದ್ದೀರಿ, ನಿಮ್ಮ ತಾಕತ್ತನ್ನು ಪ್ರದರ್ಶಿಸಿ, ಸಾಧ್ಯವಾದರೆ ನಾನೂ ಬರ್ತೇನೆ ಎಂದು ರಾಹುಲ್ ಗಾಂಧಿ ಸಿದ್ದರಾಮಯ್ಯಗೆ ಶಹಬ್ಬಾಸ್ ಎಂದು ಬೆನ್ನುತಟ್ಟಿದ್ದಾರೆ.
ಇದನ್ನೂ ಓದಿ : ಡಿಸೆಂಬರ್ 5 ಜೆಡಿಎಸ್ಗೆ ದೊಡ್ಡ ಆಘಾತ – ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಪೋಸ್ಟ್..!