ಬೆಂಗಳೂರು : ಮುಂದಿನ ವರ್ಷ ರಾಜ್ಯ ಸರ್ಕಾರಿ ನೌಕರರ ಬಹು ಕಾಲದ ಕನಸಾಗಿರುವ NPS ಅನ್ನು OPS ಮಾಡಲು ರಾಜ್ಯ ಸರ್ಕಾರ ಒಪ್ಪಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿರುವ ಷಡಕ್ಷರಿ ಮಾಹಿತಿ ನೀಡಿದ್ರು. ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ಸ್ಥಾನಕ್ಕೆ ಎಲೆಕ್ಷನ್ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮಾತನಾಡಿದರು. ಡಿಸೆಂಬರ್ 27ರಂದು ನಡೆಯಲಿರುವ ರಾಜ್ಯ ಖಜಾಂಚಿ ಸ್ಥಾನದ ಚುನಾವಣೆಯಲ್ಲಿ 5.25 ಲಕ್ಷ ಸರ್ಕಾರಿ ನೌಕರರು ಹಕ್ಕು ಚಲಾಯಿಸಲಿದ್ದಾರೆ. ಇದೊಂದು ದೊಡ್ಡ ಚುನಾವಣೆಯಾಗಿದ್ದು ಉತ್ತರ ಕರ್ನಾಟಕಕ್ಕೆ ಆದ್ಯತೆ ಸಿಗಲಿದೆ ಎಂದ್ರು.
ಸಂಘದ ಅಧ್ಯಕ್ಷರಾಗಿರುವ ನಾನು ಮಧ್ಯ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದೇನೆ. ಕಳೆದ 5 ವರ್ಷಗಳಿಂದ ಸರ್ಕಾರಿ ನೌಕರರ ಕಣ್ಣೀರು ಒರೆಸಿದ್ದೇನೆ. ನಮ್ಮ ಕನಸು ಎಂದು 250 ಕೊಠಡಿಗಳ ನೌಕರರ ಭವನವನ್ನು ಕಟ್ಟುತ್ತಿದ್ದೇವೆ. ಮುಂದಿನ ವರ್ಷ NPS ಅನ್ನು OPS ಮಾಡಲು ಸರ್ಕಾರ ಒಪ್ಪಿದೆ. ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿ ವೇತನಕ್ಕೂ ಶಿಫಾರಸ್ಸು ಆಗಿದ್ದು ಸೆಂಟ್ರಲ್ ಪೇ ವಿಚಾರವಾಗಿ ಅರ್ಧದಷ್ಟು ಕೆಲಸ ಮುಗಿದಿದೆ ಎಂದು ಸಿ.ಎಸ್. ಷಡಕ್ಷರಿ ಹೇಳಿದ್ರು.
ಇನ್ನು ಮುಂದಿನ ವರ್ಷ ಜನವರಿಗೆ ಸರ್ಕಾರಿ ನೌಕರರಿಗೆ ಹೆಲ್ತ್ ಸ್ಕೀಂ ಕೊಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಮುಂದಿನ ತಿಂಗಳಿನಿಂದಲೇ ಹೆಲ್ತ್ ಸ್ಕೀಮ್ ಲಾಂಚ್ ಆಗಲಿದೆ ಎಂದು ತಮ್ಮ ಅವಧಿಯಲ್ಲಿ ಆಗುತ್ತಿರುವ ಹಾಗೂ ಸರ್ಕಾರಿ ನೌಕರರ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ್ರು.
ಇದನ್ನೂ ಓದಿ : ಕಂಪನಿ ಲೋಗೋ ಬಳಸಿ ವಂಚನೆ ಮಾಡುತ್ತಿದ್ದ ಅಂತರರಾಜ್ಯ ಗ್ಯಾಂಗ್ ಅರೆಸ್ಟ್..!