ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಪ್ರಾಸಿಕ್ಯೂಷನ್ ಅರ್ಜಿಗಳಿಗೆ ಅನುಮತಿ ನೀಡುವಂತೆ ಆಗ್ರಹಿಸಿ ಇಂದು ರಾಜ್ಯ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜಭವನ ಚಲೋ ನಡೆಸಲಿದ್ದಾರೆ.
ಕಾಲ್ನಡಿಗೆಯಲ್ಲಿ ರಾಜ್ಯಪಾಲರ ಭೇಟಿಗೆ ಹೋಗಿದ್ದ ಕಾಂಗ್ರೆಸ್ ನಿಯೋಗ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಭೇಟಿ ಮಾಡಿ ವಿಪಕ್ಷ ನಾಯಕರ ಪ್ರಾಸಿಕ್ಯೂಷನ್ಗೂ ಅನುಮತಿ ಕೊಡಿ. ಬಾಕಿ ಇರುವ ಪ್ರಕರಣಗಳಲ್ಲೂ ತೀರ್ಮಾನ ಮಾಡಿ ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಕೆ ಮಾಡಿದೆ.
ರಾಜ್ಯಪಾಲರ ಭೇಟಿ ನಂತರ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಸಿಎಂ ಸಿದ್ದರಾಮಯ್ಯ ವಿಚಾರವಾಗಿ ನಾವು ಭೇಟಿ ಮಾಡಿಲ್ಲ. ಹೆಚ್ಡಿಕೆ ಸೇರಿ ನಾಲ್ವರು ಮಾಜಿ ಸಚಿವರ ಚಾರ್ಜ್ಶೀಟ್ಗೆ ಅನುಮತಿ ಕೇಳಿದ್ದಾರೆ. SIT ಕೇಳಿರುವ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಬೇಕು ಎಂದಿದ್ದಾರೆ.
ಇನ್ನು ಸಿದ್ದರಾಮಯ್ಯ ಕೇಸ್ನಲ್ಲಿ ಅರ್ಜಿ ಕೊಟ್ಟ ತಕ್ಷಣ ನೋಟಿಸ್ ಕೊಟ್ಟಿದ್ದರು. ಸಿದ್ದರಾಮಯ್ಯ ಅವ್ರ ಪ್ರಕರಣದಲ್ಲಿ ಇನ್ನೂ ತನಿಖೆಯೇ ಆಗಿಲ್ಲ. ಆದ್ರೆ ಉಳಿದ ಕೇಸಿನಲ್ಲಿ ತನಿಖೆಯಾಗಿದೆ, ಆದ್ರೂ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಗವರ್ನರ್ ಆಫೀಸ್ ರಾಜಕೀಯ ಕಚೇರಿ ಆಗಬಾರದು. ರಾಜ್ಯಪಾಲರ ಪೀಠ ನ್ಯಾಯಾಲಯದ ಪೀಠ ಇದ್ದ ಹಾಗೇ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಸಾಥ್ ನೀಡಬಾರದು. ಬೇರೆ ಅರ್ಜಿ ನೋಡಿದಂತೆ ನಮ್ಮ ಅರ್ಜಿಗಳನ್ನೂ ನೋಡಿ, ಕಾನೂನು ಉಳಿಸಿ ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : ನ್ಯೂಡ್ ಚಿತ್ರಕ್ಕೂ ರೆಡಿನಾ ಕೇಳಿದ… ಶಾಕಿಂಗ್ ವಿಷ್ಯ ತಿಳಿಸಿದ ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ..!