ಬೆಂಗಳೂರು : ಮುಡಾ ಸೈಟು ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆದೇಶ ಹೊರಡಿಸಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೊತ್ತಲ್ಲೇ ರಾಜ್ಯಪಾಲರು ತಾವು ನಿತ್ಯವೂ ಬಳಸುತ್ತಿದ್ದ ಸಾಮಾನ್ಯ ಕಾರನ್ನು ಬದಲಾಯಿಸಿ ಬುಲೆಟ್ ಪ್ರೂಫ್ ನಲ್ಲಿ ಓಡಾಡಲು ಶುರು ಮಾಡಿರೋದು ಚರ್ಚೆಗೆ ಕಾರಣವಾಗಿದೆ.
ಗುಪ್ತಚರ ಇಲಾಖೆಯಿಂದ ಬುಲೆಟ್ ಪ್ರೂಫ್ ಕಾರು ವ್ಯವಸ್ಥೆಯಾಗಿದ್ದು, ಭದ್ರತೆ ದೃಷ್ಟಿಯಿಂದ ಬುಲೆಟ್ ಪ್ರೂಫ್ ಕಾರು ಬಳಕೆ ಮಾಡುತ್ತಿದ್ದಾರೆ. ಇಷ್ಟು ದಿನ ಅವಕಾಶ ಇದ್ದರೂ ರಾಜ್ಯಪಾಲರು ಬುಲೆಟ್ ಪ್ರೂಫ್ ಕಾರು ಬಳಸಿರಲಿಲ್ಲ. ಈ ಹಿಂದಿನ ರಾಜ್ಯಪಾಲರು ಬಳಸುತ್ತಿದ್ದ ಬುಲೆಟ್ ಪ್ರೂಫ್ ಕಾರನ್ನು ವಾಪಸ್ ಕಳಿಸಿ ನಾರ್ಮಲ್ ಇನ್ನೋವಾ ಕಾರಿನಲ್ಲಿ ಓಡಾಡುತ್ತಿದ್ದರು. ಸಿಎಂ ವಿರುದ್ಧ ಅನುಮತಿ ಕೊಟ್ಟ ಬಳಿಕ ಥಾವರ್ ಚಂದ್ ಗೆಹ್ಲೋಟ್ ಅವರು ಎಚ್ಚರಿಕೆಯ ನಡೆ ಇಟ್ಟಿದ್ದಾರೆ.
ಆ. 21ರಿಂದ ರಾಜ್ಯಪಾಲರು ಬುಲೆಟ್ ಪ್ರೂಫ್ ಕಾರಿನಲ್ಲಿ ಓಡಾಡಲು ಆರಂಭಿಸಿದ್ದಾರೆ. ಇದು ಈಗ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಗುಪ್ತಚರ ವರದಿ ಹಿನ್ನಲೆ ಬುಲೆಟ್ ಪ್ರೂಫ್ ಕಾರು ಬಳಕೆ ಮಾಡುತ್ತಿದ್ದು, ಅಷ್ಟೇ ಅಲ್ಲದೆ ಆಗಸ್ಟ್ 29ರ ತನಕ ಎಲ್ಲಾ ಸಾರ್ವಜನಿಕ ಕಾರ್ಯಕ್ರಮ ರದ್ದು ಮಾಡಿದ್ದಾರೆ.
ಇದನ್ನೂ ಓದಿ : ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ – ನಟ ರಿಷಬ್ ಶೆಟ್ಟಿ..!