ಬೆಂಗಳೂರು : ರಾಜ್ಯಪಾಲರು ಹಲವು ಬಿಲ್ ವಾಪಸ್ ಕಳಿಸಿದ್ದಾರೆ. ಸರ್ಕಾರ-ರಾಜ್ಯಪಾಲರ ನಡುವೆ ತಾಳಮೇಳ ತಪ್ಪಿದ್ರೆ ಹೀಗೇ ಆಗೋದು. ಸ್ವಾಭಾವಿಕವಾಗಿ ಸರ್ಕಾರ-ರಾಜ್ಯಪಾಲರ ನಡುವೆ ಹೊಂದಣಿಕೆ ಇರುತ್ತೆ. ಸದ್ಯ ಹೊಂದಾಣಿಕೆ ತಪ್ಪಿ ಇದೆಲ್ಲಾ ಆಗ್ತಾ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಡಾ.ಜಿ.ಪರಮೇಶ್ವರ್, ರಾಜ್ಯಪಾಲರು 11 ಬಿಲ್ಗಳನ್ನು ಮಾಡಿದ್ದಾರೆ. ನಮ್ಮ ಸರ್ಕಾರದ ಮೇಲೆ ರಾಜ್ಯಪಾಲರಿಗೆ ನಂಬಿಕೆ ಇಲ್ಲ. ಸಾಮಾನ್ಯ ಬಿಲ್ಗಳನ್ನೂ ವಾಪಸ್ ಮಾಡಿದ್ದಾರೆ. ಈ ಮೂಲಕ ವಿಶ್ವಾಸದ ಕೊರತೆ ಇದೆ ಅನ್ನೊ ಸಂದೇಶ ನೀಡಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ರಾಜ್ಯಪಾಲರಿಗೆ ಆ ದೇವರು ಒಳ್ಳೆಯ ಬುದ್ದಿ ಕೊಡಲಿ – ಡಿಸಿಎಂ ಡಿಕೆಶಿ..!
Post Views: 44