ಬೆಳಗಾವಿ : ರಸ್ತೆಯ ಬದಿ ನಿಂತಿದ್ದ ಬಾಲಕನ ಮೇಲೆ ಸರ್ಕಾರಿ ಬಸ್ ಹರಿದು ಬಾಲಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಂಕರನಗರದಲ್ಲಿ ನಡೆದಿದೆ. 10 ವರ್ಷದ ಸೃಜನ್ ಮೃತ ಬಾಲಕ.
ಬಾಲಕ ಕಂಪ್ಯೂಟರ್ ಕ್ಲಾಸ್ಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ. ಮೃತ ಬಾಲಕ ಅಥಣಿ ಪಟ್ಟಣದ ನಿವಾಸಿ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಾಲಕನ ನಿರ್ಲಕ್ಷ್ಯಕ್ಕೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಭೀಕರ ರಸ್ತೆ ಅಪಘಾತ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : ನನ್ನ ಮಗಳು ಭೈರಾದೇವಿಗೆ ಆಡಿಷನ್ ಕೊಟ್ಟಿದನ್ನು ನೋಡಿ ನಾನೇ ಬಿಕ್ಕಿ ಬಿಕ್ಕಿ ಅತ್ತೆ – ರಾಧಿಕಾ ಕುಮಾರಸ್ವಾಮಿ..!
Post Views: 268