Download Our App

Follow us

Home » ರಾಜ್ಯ » ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ – ಇಂದಿನಿಂದ ಪ್ರೀಮಿಯಂ ಬ್ರ್ಯಾಂಡ್‌ಗಳ ದರ ಇಳಿಕೆ..!

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ – ಇಂದಿನಿಂದ ಪ್ರೀಮಿಯಂ ಬ್ರ್ಯಾಂಡ್‌ಗಳ ದರ ಇಳಿಕೆ..!

ಬೆಂಗಳೂರು : ರಾಜ್ಯದ ಮದ್ಯಪ್ರಿಯರಿಗೆ ಇದು ಗುಡ್ ನ್ಯೂಸ್. ಇಂದಿನಿಂದ ಮದ್ಯದ ದರ ಇಳಿಕೆಯಾಗಲಿದೆ. ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಪ್ರೀಮಿಯಂ ಬ್ರ್ಯಾಂಡ್‌ಗಳ ದರದಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಲಿದೆ. ಭಾರತದಲ್ಲಿ ತಯಾರಿಸಿರುವ ಮದ್ಯದ ಅಬಕಾರಿ ಸುಂಕದ ಸ್ಲ್ಯಾಬ್‌ಗಳ ಸಂಖ್ಯೆಯನ್ನು ಇತರೆ ರಾಜ್ಯಗಳ ಮದ್ಯದ ದರಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಮದ್ಯ ಮತ್ತು ಬಿಯರ್ ಬೆಲೆಗಳನ್ನು ಪರಿಷ್ಕರಿಸಲು ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರಿಂದ ರಾಜ್ಯದಲ್ಲಿ ಮದ್ಯದ ದರದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವಾಗಲಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ.

ಈಗಾಗಲೇ ಕರಡು ಅಧಿಸೂಚನೆ ಹೊರಡಿಸಿ ಒಂದೂವರೆ ತಿಂಗಳಾದರೂ ಅಂತಿಮಗೊಳಿಸದ ಕಾರಣ ಮಾರುಕಟ್ಟೆಯಲ್ಲಿ ಪ್ರೀಮಿಯಂ ಬ್ರಾಂಡ್‌ಗಳ ಮದ್ಯಕ್ಕೆ ಭಾರಿ ಕೊರತೆ ಉಂಟಾಗಿತ್ತು. ಇದೀಗ ಅಂತಿಮ ಅಧಿಸೂಚನೆಯಂತೆ ಸ್ಲ್ಯಾಬ್‌ಗಳ ಸಂಖ್ಯೆ 18 ರಿಂದ 16ಕ್ಕೆ ಇಳಿಸಲಾಗಿದೆ. ಆದರೆ ಮೊದಲ ಮೂರು ಸ್ಲ್ಯಾಬ್ ಗಳಲ್ಲಿ ದರದ ವ್ಯತ್ಯಾಸ ಆಗುವುದಿಲ್ಲ. ನಾಲ್ಕನೇ ಸ್ಲ್ಯಾಬ್ ನಲ್ಲಿ ಮದ್ಯದ ದರ ಸ್ವಲ್ಪ ಏರಿಕೆಯಾಗಲಿದೆ. ಉಳಿದಂತೆ ಐದನೇ ಸ್ಲಾಬ್ ಬಳಿಕ 16ನೇ ಸ್ಲ್ಯಾಬ್‌ವರೆಗೆ ದರ ಕಡಿಮೆಯಾಗಲಿದೆ. ಆ ಸ್ಲ್ಯಾಬ್ ಗಳಲ್ಲಿನ ವಿಸ್ಕಿ, ರಮ್, ಬ್ರಾಂಡಿಗಳ ಬೆಲೆ ಸಹಜವಾಗಿಯೇ ಕಡಿಮೆಯಾಗಲಿದೆ.

ರಾಜ್ಯದಲ್ಲಿ ಈವರೆಗೆ 18 ಸ್ಲ್ಯಾಬ್ ಗಳಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಸ್ಲ್ಯಾಬ್‌ಗಳ ಸಂಖ್ಯೆಯನ್ನು 16ಕ್ಕೆ ಇಳಿಕೆ ಮಾಡಲಾಗಿದೆ. ಪ್ರತಿ ಬಲ್ಕ್ ಲೀಟರ್ ಮದ್ಯದ ಘೋಷಿತ ಉತ್ಪಾದನಾ ದರ 449 ರೂ. ಮೊದಲ ಸ್ಲ್ಯಾಬ್‌ನಲ್ಲಿದ್ದರೆ 15 ಸಾವಿರ ರೂ.ನಿಂದ ಮೇಲಿನ ಘೋಷಿತ ದರದ ಎಲ್ಲ ಮದ್ಯಗಳನ್ನು 18ನೇ ಸ್ಲ್ಯಾಬ್‌ನಲ್ಲಿಡಲಾಗಿತ್ತು. ಪರಿಷ್ಕೃತ ಪಟ್ಟಿಯ ಪ್ರಕಾರ, ಪ್ರತಿ ಬಲ್ಕ್ ಲೀಟರ್‌ನ ಘೋಷಿತ ಉತ್ಪಾದನಾ ದರ 450 ರೂ. ಹೊಂದಿರುವ ಮದ್ಯ ಮೊದಲ ಸ್ಲ್ಯಾಬ್‌ನಲ್ಲಿದ್ದರೆ 20 ಸಾವಿರ ರೂ. ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ಉತ್ಪಾದನಾ ದರ ಹೊಂದಿರುವ ಮದ್ಯವನ್ನು 16ನೇ ಸ್ಲ್ಯಾಬ್‌ಗೆ ಸೇರಿಸಲಾಗಿದೆ.

ಇದನ್ನೂ ಓದಿ : ‘ಕಣ್ಣಪ್ಪ’ ಚಿತ್ರದಲ್ಲಿ ಅವ್ರಾಮ್‌ ಮಂಚು ಪಾತ್ರದ ಫಸ್ಟ್‌ ಲುಕ್‌ ರಿಲೀಸ್​​..!

 

 

 

 

 

 

 

 

 

Leave a Comment

DG Ad

RELATED LATEST NEWS

Top Headlines

ಹುಬ್ಬಳ್ಳಿ-ಪುಣೆ ವಂದೇ ಭಾರತ್​ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ..!

ದೇಶದ ಮೊದಲ ವಂದೇ ಭಾರತ್​ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಗುಜರಾತ್​ನ ಭುಜ್​-ಅಹ್ಮದಾಬಾದ್​ ನಡುವೆ ವಂದೇ ಭಾರತ್​ ಮೆಟ್ರೋ ಸಂಚಾರ ಮಾಡಲಿದೆ. 100-250

Live Cricket

Add Your Heading Text Here