ಬೆಂಗಳೂರು : ಬೆಂಗಳೂರಿನಲ್ಲಿ 2025 ಫೆ. 12 ರಿಂದ 14ರವರೆಗೆ ಬೃಹತ್ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಸರ್ಕಾರ ಆಯೋಜಿಸಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದ ಸಚಿವ ಎಂ.ಬಿ ಪಾಟೀಲ್ ಸಭೆ ನಡೆಸಿದ್ದಾರೆ.
ಬೃಹತ್ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ದೇಶೀಯ ಮತ್ತು ವಿಶ್ವದಾದ್ಯಂತ ಹಲವಾರು ಕಂಪನಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿವೆ. ಈ ಹಿನ್ನಲೆಯಲ್ಲಿ ಮೇಳವನ್ನು ಯಶಸ್ವಿಗೊಳಿಸಿ, ರಾಜ್ಯಕ್ಕೆ ಅತ್ಯಧಿಕ ಹೂಡಿಕೆಯನ್ನು ಆಕರ್ಷಿಸುವ ಕುರಿತು ಎಂ.ಬಿ ಪಾಟೀಲ್ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಹಾಗೆಯೇ ಬೃಹತ್ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ವಿಶೇಷವಾಗಿ ಮತ್ತು ಆಕರ್ಷಕವಾಗಿ ರೂಪಿಸಲು ಎಂ.ಬಿ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ : ರಂಗೇರಿದ ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡ – ಇಂದು ಇಡೀ ದಿನ ಯೋಗೇಶ್ವರ ಪರ ಡಿಸಿಎಂ ಮತಬೇಟೆ..!
Post Views: 22