Download Our App

Follow us

Home » ಅಂತಾರಾಷ್ಟ್ರೀಯ » ಮಹಿಳೆಯರಿಗೆ ಗೇಟ್​ಪಾಸ್​ ಕೊಡಿ – ಎನ್‌ಜಿಒಗಳಿಗೆ ತಾಲಿಬಾನ್‌ ಆಗ್ರಹ

ಮಹಿಳೆಯರಿಗೆ ಗೇಟ್​ಪಾಸ್​ ಕೊಡಿ – ಎನ್‌ಜಿಒಗಳಿಗೆ ತಾಲಿಬಾನ್‌ ಆಗ್ರಹ

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಮತ್ತೊಂದು ಕಠೋರ ನಿಯಮಕ್ಕೆ ತಾಲಿಬಾನ್‌ ಸರ್ಕಾರ ಮುಂದಾಗಿದೆ. ದೇಶದಲ್ಲಿ ಎಲ್ಲಾ ರಾಷ್ಟ್ರೀಯ ಮತ್ತು ವಿದೇಶಿ ಸರ್ಕಾರೇತರ ಸಂಸ್ಥೆಗಳು ಹಾಗೂ ಎನ್‌ಜಿಒಗಳಿಂದ ಮಹಿಳಾ ಉದ್ಯೋಗಿಗಳನ್ನು ಕೈಬಿಡಲು ಆದೇಶಿಸಿದೆ. ಈ ಆದೇಶ ಉಲ್ಲಂಘಿಸಿ ಮಹಿಳೆಯರನ್ನು ನೇಮಿಸಿಕೊಂಡರೆ ಅಂತಹ ಸಂಸ್ಥೆಗಳನ್ನು ಮುಚ್ಚುವುದಾಗಿ ಹೇಳಿದೆ.

ಅಫ್ಘಾನಿಸ್ತಾನದ ಆರ್ಥಿಕ ಸಚಿವಾಲಯ ಈ ಬಗ್ಗೆ ಎಕ್ಸ್‌ನಲ್ಲಿ ಆದೇಶ ಪ್ರತಿಯನ್ನು ಪ್ರಕಟಿಸಿದೆ. ಆದೇಶದ ಅನ್ವಯ ವಿದೇಶಿ ಸಂಸ್ಥೆಗಳಲ್ಲಿ ಮಹಿಳಾ ಉದ್ಯೋಗಿಗಳ ಕೆಲಸವನ್ನು ಕೂಡಲೇ ನಿಲ್ಲಿಸಲು ಸೂಚಿಸಲಾಗಿದೆ. ಈ ನಿಯಮ ಅನುಸರಿಸಲು ವಿಫಲವಾದರೆ NGO ಹಾಗೂ ಸಂಸ್ಥೆಗಳ ಪರವಾನಗಿಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದೆ.

ಅಫ್ಘಾನ್ ಮಹಿಳೆಯರನ್ನು ಉದ್ಯೋಗದಿಂದ ಅಮಾನತುಗೊಳಿಸುವಂತೆ ತಾಲಿಬಾನ್ ಎನ್‌ಜಿಒಗಳಿಗೆ ಹೇಳಿದ ಎರಡು ವರ್ಷಗಳ ನಂತರ ಈ ಆದೇಶ ಬಂದಿದೆ. ಹಿಜಬ್ ಸರಿಯಾಗಿ ಧರಿಸದ ಕಾರಣ ಈ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ತಾಲಿಬಾನ್‌ ಸರ್ಕಾರ ಈಗಾಗಲೇ ಅನೇಕ ಉದ್ಯೋಗ ಮತ್ತು ಬಹುತೇಕ ಸಾರ್ವಜನಿಕ ಸ್ಥಳಗಳಿಂದ ಮಹಿಳೆಯರನ್ನು ನಿರ್ಬಂಧಿಸಲಾಗಿದೆ. ಆರನೇ ತರಗತಿಯ ನಂತರದ ಶಿಕ್ಷಣದಿಂದಲೂ ಹೆಣ್ಣುಮಕ್ಕಳನ್ನು ಹೊರಗಿಡಲಾಗಿದೆ.

ಈ ನಿಯಮಗಳನ್ನು ಅನುಸರಿಸಲು ವಿಫಲವಾದರೆ NGO ಹಾಗೂ ಸಂಸ್ಥೆಗಳ ಪರವಾನಗಿಯನ್ನು ರದ್ದುಪಡಿಸುವುದಾಗಿ ತಾಲಿಬಾನ್​ ಸರ್ಕಾರ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : ಕೈನಲ್ಲೇ ಡೆತ್​​​ನೋಟ್ ಹಿಡ್ಕೊಂಡು KSDL ಅಧಿಕಾರಿ ಆತ್ಮಹತ್ಯೆ..!

Leave a Comment

DG Ad

RELATED LATEST NEWS

Top Headlines

ಬಿಗ್​​ಬಾಸ್​​ನಲ್ಲಿ ಮಿಡ್​​ನೈಟ್ ಎಲಿಮಿನೇಷನ್ – ಸ್ಟ್ರಾಂಗ್ ಕಂಟೆಸ್ಟ್ ಗೌತಮಿ ಜಾಧವ್ ಔಟ್ ಆದ್ರಾ?

ಬಿಗ್‌ಬಾಸ್ ಕನ್ನಡ ಸೀಸನ್‌ 11ರ ಗ್ಯ್ರಾಂಡ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಕಳೆದ ವಾರ ಟಿಕೆಟ್‌ ಟು ಫಿನಾಲೆಗಾಗಿ ಜಿದ್ದಾಜಿದ್ದಿಯ ಹೋರಾಟ ನಡೆಸಿದ್ದ ಸ್ಪರ್ಧಿಗಳು

Live Cricket

Add Your Heading Text Here