ಬೆಂಗಳೂರು : ಪಾರ್ಟಿಗೆ ಅಂತಾ ಕರೆದು ಪರಸ್ಪರ ಗರ್ಲ್ ಫ್ರೆಂಡ್ನ ಎಕ್ಸ್ಚೇಂಜ್ ಮಾಡಿಕೊಳ್ಳುವ ದಂಧೆ ನಗರದ ಹೊರ ವಲಯದಲ್ಲಿ ನಡೆಯುತ್ತಿದೆ. ಪರಿಚಯಸ್ಥ ಯುವತಿಯನ್ನ ಸ್ನೇಹಿತನ ಜೊತೆ ಬೆಡ್ ಶೇರ್ ಮಾಡುವಂತೆ ಬಲವಂತ ಮಾಡಿದ್ದು, ಒಪ್ಪದಿದ್ದಕ್ಕೆ ಸ್ನೇಹಿತರ ಜೊತೆಗೆ ಸೇರಿ ಯುವತಿಯನ್ನು ಅತ್ಯಾಚಾರ ಮಾಡಿದ್ದಾರೆ.
ಅತ್ಯಾಚಾರಕ್ಕೊಳಗಾದ ಯುವತಿ ಸಿಸಿಬಿಗೆ ದೂರು ನೀಡಿದ್ದು, ಈ ಕರಾಳ ದಂಧೆ ನಡೆಸುತ್ತಿದ್ದ ಕಾಮುಕರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹರೀಶ್, ಹೇಮಂತ್ ಬಂಧಿತ ಆರೋಪಿಗಳು.
ಯುವತಿಯನ್ನ ಪರಿಚಯ ಮಾಡಿಕೊಂಡಿದ್ದ ಹರೀಶ್ ಆಕೆಯನ್ನ ಲೈಂಗಿಕವಾಗಿ ಬಳಸಿಕೊಂಡಿದ್ದ. ಜೋಡಿ ಹಕ್ಕಿಯಂತೆ ಎಲ್ಲಾ ಕಡೆ ಸುತ್ತಾಡಿದ್ದಾರೆ, ಇತ್ತೀಚೆಗೆ ಆರೋಪಿ ಹರೀಶ್ ತನ್ನ ಅಸಲಿ ಮುಖ ತೋರಿಸಿದ್ದ. ವಾಟ್ಸ್ ಗ್ರೂಪ್ ಮಾಡಿಕೊಂಡಿದ್ದ ‘ಸ್ವಿಂಗರ್ಸ್’ ಟೀಂ ಬೆಂಗಳೂರು ಹೊರ ವಲಯದಲ್ಲಿ ಪಾರ್ಟಿ ಆಯೋಜನೆ ಮಾಡಿತ್ತು. ಆಸಾಮಿಗಳು ಪಾರ್ಟಿಗೆ ಕಪಲ್ಸ್ ಜೊತೆಗೆ ಬರ್ತಿದ್ದರು.
ಪಾರ್ಟಿಯಲ್ಲಿ ಪರಸ್ಪರ ಪ್ರಿಯತಮೆಯರನ್ನ ಎಕ್ಸ್ ಚೇಂಜ್ ಮಾಡಿಕೊಂಡು ಒಬ್ಬನ ಗರ್ಲ್ ಫ್ರೆಂಡ್ ಜೊತೆಗೆ ಮತ್ತೊಬ್ಬ ಬೆಡ್ ಶೇರ್ ಮಾಡಿಕೊಳ್ಳುತ್ತಿದ್ದರು. ಇದೇ ರೀತಿ ಹರೀಶ್ ಯುವತಿಯನ್ನ ಈ ಕೃತ್ಯಕ್ಕೆ ದೂಡಿದ್ದ. ಒಪ್ಪದಿದ್ದಾಗ ಸ್ನೇಹಿತರ ಜೊತೆಗೆ ಸೇರಿ ಅತ್ಯಾಚಾರ ಮಾಡಿದ್ದಾನೆ. ಈ ಘಟನೆಯಿಂದ ಬೇಸತ್ತು ಯುವತಿ ಸಿಸಿಬಿಗೆ ದೂರು ನೀಡಿದ್ದಳು. ಸದ್ಯ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೊಬೈಲ್ ಪರಿಶೀಲನೆ ವೇಳೆ ಭಯಾನಕ ಸತ್ಯ ಬಯಲಾಗಿದ್ದು, ಮೊಬೈಲ್ನಲ್ಲಿ ಹತ್ತಾರು ಯುವತಿಯರ ಬೆತ್ತಲೆ ಫೋಟೊ ಪತ್ತೆಯಾಗಿದೆ. ಏಕಾಂತದಲ್ಲಿದ್ದ ವಿಡಿಯೋ ಮಾಡಿಟ್ಟುಕೊಂಡಿದ್ದ ಆಸಾಮಿಗಳು ಅದೇ ವೀಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡ್ತಿರೋದು ಮೊಬೈಲ್ ಪರಿಶೀಲನೆಯಲ್ಲಿ ಬಯಲಾಗಿದೆ.
ಇದನ್ನೂ ಓದಿ : ‘ಯುಐ’ ಸಿನಿಮಾಗೆ ರಾಜ್ಯಾದ್ಯಂತ ಭರ್ಜರಿ ವೆಲ್‌ಕಮ್ – ಉಪ್ಪಿ ನಟನೆ, ನಿರ್ದೇಶನಕ್ಕೆ ಫುಲ್ ಮಾರ್ಕ್ಸ್ ಕೊಟ್ಟ ಪ್ರೇಕ್ಷಕರು!