ಬಾಗಲಕೋಟೆ : ಬಾಗಲಕೋಟೆಯಲ್ಲಿ ಘಟಪ್ರಭಾ ನದಿಯು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಧಾರವಾಡ-ವಿಜಯಪುರ ಸಂಪರ್ಕದ ರಾಜ್ಯ ಹೆದ್ದಾರಿ ಮೇಲೆ ಘಟಪ್ರಭಾ ನದಿ ನೀರು ಬಂದಿದ್ದು, ಮುಧೋಳ ತಾಲ್ಲೂಕಿನ ಚಿಚಕಂಡಿ ಬಳಿಯ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.
ಹೀಗಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ರಸ್ತೆ ಮೇಲೆ ಯಾರೂ ಸಂಚಾರ ಮಾಡದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ರಸ್ತೆಗೆ ಮುಳ್ಳು ಬೇಲಿ ಹಾಕಿ ಸಂಚಾರ ಬಂದ್ ಮಾಡಲಾಗಿದೆ.
ಬೆಳಗಾವಿಯಿಂದ ವಿಜಯಪುರಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದೆ. ಚಿಚಕಂಡಿ ಗ್ರಾಮದ 400 ಎಕರೆಗೂ ಹೆಚ್ಚಿನ ಜಮೀನು ಜಲಾವೃತವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಬೆಳೆಗಳು ನೀರುಪಾಲಾಗಿವೆ.
ಇದನ್ನೂ ಓದಿ : ಡಿಕೆಶಿಯನ್ನು ಸಿಎಂ ಮಾಡೋಕೆ ವಿಜಯೇಂದ್ರ ಪಾದಯಾತ್ರೆ – ಬಿಗ್ ಬಾಂಬ್ ಸಿಡಿಸಿದ ಯತ್ನಾಳ್..!
Post Views: 26