ವಿಜಯನಗರ : ಜೆನ್ನಿ ಮಿಲ್ಕ್ ಬಹು ಕೋಟಿ ವಂಚನೆ ಪ್ರಕರಣದಲ್ಲಿ ಆಹಾರ, ಓಡಾವಿಲ್ಲದೇ ನರಳಾಡ್ತಿದ್ದ ಕತ್ತೆಗಳಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ನ್ಯಾಯಾಲಯದ ಅನುಮತಿ ಪಡೆದು ಕತ್ತೆಗಳ ಹರಾಜು ಮಾಡಲಾಗಿದೆ.
ಜೆನ್ನಿ ಮಿಲ್ಕ್ ಕತ್ತೆಗಳ ಮಾರಾಟ ಪ್ರಕರಣದಲ್ಲಿ ಒಟ್ಟು 13 ಕೋಟಿ ರೂ. ಅಧಿಕ ವಂಚನ ಆಗಿದೆ ಎಂದು 319 ನೊಂದವರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ತಂಡಗಳನ್ನು ರಚಿಸಿ, ತನಿಖೆ ಕೈಗೊಂಡ ಪೊಲೀಸರು ಐದು ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು. ಜತೆಗೆ ಕಂಪನಿಗೆ ಸೇರಿದ 44 ಉಳಿದ ಕತ್ತೆಗಳನ್ನು ಕೂಡ ವಶಕ್ಕೆ ಪಡೆಯಲಾಗಿತ್ತು.
ಇನ್ನು ಜಿನ್ನಿ ಮಿಲ್ಕ್ ಕಂಪನಿ ಕ್ಲೋಸ್ ಆದ ಬಳಿಕ ಆಹಾರವಿಲ್ಲದೇ ಕತ್ತೆಗಳು ಸಾವನ್ನಪ್ಪಿದ್ದವು. 7 ಕತ್ತೆಗಳು ಸಾವನ್ನಪ್ಪಿದ ಬಳಿಕ CIDಯಿಂದ ಆರೈಕೆ ಮಾಡಲಾಗ್ತಿತ್ತು. ಇವುಗಳ ಯಾತನೆ ಮನಗಂಡ ಸಿಐಡಿ ಅಧಿಕಾರಿಗಳು, ನ್ಯಾಯಾಲಯದ ಅನುಮತಿ ಪಡೆದು ಕತ್ತೆಗಳ ಹರಾಜು ನಡೆಸಿದೆ. ಆಂಧ್ರಪ್ರದೇಶದ ರಾಯದುರ್ಗದ ಸುರೇಶ್ ಕತ್ತೆಗಳನ್ನು ಹರಾಜಿಗೆ ಪಡೆದಿದ್ದಾರೆ. ಅಗಸರಾಗಿರೋ ಸುರೇಶ್ ಮತ್ತು ಸಂಬಂಧಿಕರು 2 ಲಕ್ಷ 20 ಸಾವಿರ ಹಣ ಕಟ್ಟಿ, ಕತ್ತೆಗಳ ಹರಾಜು ಪಡೆದಿದ್ದಾರೆ.
ಇದನ್ನೂ ಓದಿ : ತುಮಕೂರು : ಪ್ರೀತಿಸಿದ ಹುಡುಗಿ ಮನೆ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡ ಯುವಕ.. ಕಾರಣವೇನು?
Post Views: 77