ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗ ಗೌತಮಿ, ಉಗ್ರಂ ಮಂಜು ಮತ್ತು ಮೋಕ್ಷಿತಾ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ನಂತರ ಟಾಸ್ಕ್ ವಿಚಾರಕ್ಕೆ ಈ ಮೂವರ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಹಾಗಾಗಿ ಉಗ್ರಂ ಮಂಜು ಮತ್ತು ಗೌತಮಿಯ ಸಂಘ ಬಿಟ್ಟು ಮೋಕ್ಷಿತಾ ಒಬ್ಬರೇ ಆಡಲು ಶುರುಮಾಡಿದರು.
ಪದೇ ಪದೇ ಮೋಕ್ಷಿತಾ ಹಾಗೂ ಮಂಜು-ಗೌತಮಿ ನಡುವೆ ಜಗಳ ನಡೆಯುತ್ತಲೇ ಇತ್ತು. ಕಳೆದ ವಾರವಂತೂ ಈ ಜಗಳ ತರಕಕ್ಕೇರಿತ್ತು. ಆದರೆ ಇದೀಗ ಅಪರೂಪಕ್ಕೆ ಗೌತಮಿ ಅವರು ಮೋಕ್ಷಿತಾನನ್ನು ಹೊಗಳಿ ಮಾತನಾಡಿದ್ದಾರೆ. ಹಾಗಾಗಿ ಗೌತಮಿ ಮಂಜುಗೆ ಕೈ ಕೊಟ್ಟು ಮೋಕ್ಷಿತಾಗೆ ಹತ್ತಿರವಾಗೋಕೆ ಹೊರಟ್ರಾ ಎಂಬ ಅನುಮಾನ ಮೂಡಿದೆ.
ಬಿಗ್ಬಾಸ್ ಕೊಟ್ಟ ಟಾಸ್ಕ್ನಿಂದ ಇಷ್ಟು ದಿನ ದೂರವಾಗಿದ್ದ ಮೋಕ್ಷಿತಾ ಹಾಗೂ ಗೌತಮಿ ಮತ್ತೆ ಜೋಡಿಯಾಗ್ತಾರಾ ಅಂತ ವೀಕ್ಷಕರು ಕೂಡ ಕಾಯುತ್ತಿದ್ದಾರೆ. ಆದರೆ ಗೌತಮಿ ಲೆಕ್ಕಾಚಾರ ಈ ವಿಚಾರದಲ್ಲಿ ವರ್ಕೌಟ್ ಆಗುತ್ತಾ ಅಂತ ಕಾದು ನೋಡಬೇಕಿದೆ.
ಇದನ್ನೂ ಓದಿ : ದಾವಣಗೆರೆ : ಚಾಲಕನ ನಿಯಂತ್ರಣ ತಪ್ಪಿ ಮನೆ ಗೋಡೆಗೆ ಗುದ್ದಿದ ಕಾರು..!
Post Views: 174