Download Our App

Follow us

Home » ಸಿನಿಮಾ » ‘ನನ್ನಿಂದ ದೂರ ಇದ್ರೆ ಒಳ್ಳೆದು’ – ಉಗ್ರಂ ಮಂಜುಗೆ ಖಡಕ್​ ವಾರ್ನಿಂಗ್​ ಕೊಟ್ಟ ಗೌತಮಿ!

‘ನನ್ನಿಂದ ದೂರ ಇದ್ರೆ ಒಳ್ಳೆದು’ – ಉಗ್ರಂ ಮಂಜುಗೆ ಖಡಕ್​ ವಾರ್ನಿಂಗ್​ ಕೊಟ್ಟ ಗೌತಮಿ!

ಕನ್ನಡದ ಜನಪ್ರಿಯ​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 13ನೇ ವಾರಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ವಾರ ಕಳೆದಂತೆ ಬಿಗ್​ಬಾಸ್​ ಮನೆಯಿಂದ ಒಬ್ಬೊಬ್ಬರಾಗಿ ಆಚೆ ಹೋಗುತ್ತಿದ್ದಾರೆ. ಈ ಮಧ್ಯೆ ಮಂಜಣ್ಣ ಹಾಗೂ ಗೌತಮಿ ಸ್ನೇಹದಲ್ಲಿ ಮತ್ತೆ ಬಿರುಕು ಮೂಡಿದೆ.

ಹೌದು, ಬಿಗ್​ಬಾಸ್​ ಶುರುವಾದಾಗಿನಿಂದ ಈ ಇಬ್ಬರು ಇಲ್ಲಿಯವರೆಗೂ ಜೋಡಿಯಾಗೇ ಇದ್ದರು. ಆದ್ರೆ ಏಕಾಏಕಿ ಈ ಇಬ್ಬರ ಮಧ್ಯೆ ಬಿರುಕು ಮೂಡಿದೆ. ಗೆಳತಿ ಗೆಳತಿ ಎನ್ನುತ್ತಲೇ ಗೌತಮಿಗೆ ಸಪೋರ್ಟ್​ ಮಾಡಿಕೊಂಡು ಬರುತ್ತಿದ್ದ ಮಂಜು ಸದ್ಯ ಶಾಕ್​ನಲ್ಲಿದ್ದಾರೆ. ಪ್ರತಿಯೊಂದು ವಿಚಾರಲ್ಲೂ ಗೆಳತಿ ಬಗ್ಗೆ ವಹಿಸಿಕೊಂಡು ಮಾತಾಡುತ್ತಿದ್ದ ಮಂಜು ಸದ್ಯ ಗೌತಮಿ ಖಡಕ್​ ಮಾತಿಗೆ ಕಕ್ಕಾಬಿಕ್ಕಿಯಾಗಿದ್ದಾರೆ.

ಪ್ರತಿ ವಿಚಾರಕ್ಕೂ ಮಂಜಣ್ಣನ ಮೇಲೆ ಗೌತಮಿ ಕೋಪಗೊಳ್ಳುತ್ತಿದ್ದಾರೆ. ಕ್ಯಾಪ್ಟನ್​ ಪಟ್ಟ ಸಿಗುತ್ತಿದ್ದಂತೆ ಗೌತಮಿ ಬದಲಾಗಿ ಬಿಟ್ರಾ ಎಂಬ ಅನುಮಾನ ವಿಕ್ಷಕರಿಗೆ ಮೂಡಿತ್ತು. ಆದ್ರೆ ಈಗ ಮತ್ತೆ ಗೌತಮಿ ‘ನೀವು ನನ್ನ ಜೊತೆಗೆ ಇರಬೇಡಿ. ನನ್ನಿಂದ ದೂರ ಇದ್ರೆ ಒಳ್ಳೆದು. ನೀವು ಇದ್ದರೆ ನಮಗೆ ಕಿರಿಕಿರಿ ಆಗುತ್ತೆ’ ಅಂತ ಹೇಳಿದ್ದಾರೆ. ಈ ಮಾತನ್ನು ಕೇಳಿಸಿಕೊಂಡ ಮಂಜಣ್ಣ ಅಲ್ಲಿಂದ ಎದ್ದು ಹೇಗಿದ್ದಾರೆ. ಇದಾದ ಬಳಿಕ ಮತ್ತೆ ಗೌತಮಿ ಬಳಿ ಬಂದು ಗೆಳತಿ ಅಂತ ಮಾತಾಡಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಗೌತಮಿ ಆಟ ಚೇಂಚ್​ ಆಗುತ್ತಾ ಅಥವಾ ಮತ್ತೆ ಗೆಳೆಯ ಅಂತ ಮಂಜು ಅವರ ಹಿಂದೆ ಹೋಗುತ್ತಾರಾ ಅಂತ ಕಾದುನೋಡಬೇಕು.

ಇದನ್ನೂ ಓದಿ : ಬೆಂಗಳೂರಿನ ಹಲವೆಡೆ ಇಂದು, ನಾಳೆ ವಿದ್ಯುತ್ ವ್ಯತ್ಯಯ – ಯಾವೆಲ್ಲಾ ಏರಿಯಾ? ಇಲ್ಲಿದೆ ಮಾಹಿತಿ..!

Leave a Comment

DG Ad

RELATED LATEST NEWS

Top Headlines

ಹಸು ಕೆಚ್ಚಲು ಕೊಯ್ದ ಪ್ರಕರಣ – ಮಾಲೀಕರಿಗೆ 3 ಲಕ್ಷ ರೂ. ಮೌಲ್ಯದ 3 ಹಸು ನೀಡಿದ ಸಚಿವ ಜಮೀರ್ ಅಹ್ಮದ್..!

ಬೆಂಗಳೂರು : ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಾನುವಾರುಗಳ ಮಾಲೀಕರಿಗೆ ಇಂದು ಮೂರು ಹಸುಗಳನ್ನು ನೀಡಿದ್ದಾರೆ. ಗಾಯಗೊಂಡಿದ್ದ

Live Cricket

Add Your Heading Text Here