Download Our App

Follow us

Home » ರಾಜಕೀಯ » ಗಾಂಧೀಜಿ ಎಐಸಿಸಿ ಅಧ್ಯಕ್ಷರಾಗಿ 100 ವರ್ಷ – ರಾಜ್ಯ ಕಾಂಗ್ರೆಸ್​ನಿಂದ ಸತ್ಯಾಗ್ರಹ ಮಾದರಿಯಲ್ಲಿ ಗಾಂಧಿ ನಡಿಗೆ ಕಾರ್ಯಕ್ರಮ..!

ಗಾಂಧೀಜಿ ಎಐಸಿಸಿ ಅಧ್ಯಕ್ಷರಾಗಿ 100 ವರ್ಷ – ರಾಜ್ಯ ಕಾಂಗ್ರೆಸ್​ನಿಂದ ಸತ್ಯಾಗ್ರಹ ಮಾದರಿಯಲ್ಲಿ ಗಾಂಧಿ ನಡಿಗೆ ಕಾರ್ಯಕ್ರಮ..!

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬೆಳಗಾವಿ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿ 100 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಮಹಾತ್ಮಾ ಗಾಂಧೀಜಿಯವರ 155ನೇ ಜಯಂತಿಯನ್ನು ವಿಭಿನ್ನ ಕಾರ್ಯಕ್ರಮ ಆಯೋಚನೆ ಮಾಡುವ ಮೂಲಕ ಆಚರಿಸಿಕೊಂಡಿದೆ.

ಗಾಂಧೀಜಿ ಎಐಸಿಸಿ ಅಧ್ಯಕ್ಷರಾಗಿ ನೂರು ವರ್ಷ ತುಂಬಿದ ಸವಿನೆನಪಿಗಾಗಿ ರಾಜ್ಯ ಕಾಂಗ್ರೆಸ್ ಸತ್ಯಾಗ್ರಹ ಮಾದರಿಯಲ್ಲಿ ಗಾಂಧಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಗಾಂಧಿ ನಡಿಗೆಯಲ್ಲಿ ಸಿಎಂ ಸಿದ್ದರಾಮಯ್ಯ ಹೆಜ್ಜೆ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು, ಶಾಸಕರು ಸೇರಿದಂತೆ ಹಲವು ಮುಖಂಡರು ಸಾಥ್​​ ಕೊಟ್ಟಿದ್ದಾರೆ.

ಗಾಂಧಿಭವನದಿಂದ ವಿಧಾನಸೌಧದವರೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ನಾಯಕರು ಶ್ವೇತ ವರ್ಣದ ಧಿರಿಸು, ಬಿಳಿ ಟೋಪಿ ಧರಿಸಿ ಹೆಜ್ಜೆ ಹಾಕಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​​ನಲ್ಲೂ ಕಾರ್ಯಕ್ರಮ ನಡೆಯಲ್ಲಿದೆ. ಇನ್ನು ಸಿಎಂ ಸಿದ್ದರಾಮಯ್ಯರವರು ಇಡೀ ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಹೆಚ್ಚಾಯ್ತು ಗ್ಯಾಂಗ್​​ ವಾರ್ ​​​- ಎರಡು ರೌಡಿ ಗುಂಪುಗಳ ಮಧ್ಯೆ ನಡುರಸ್ತೆಯಲ್ಲೇ ಮಾರಾಮಾರಿ..!

Leave a Comment

DG Ad

RELATED LATEST NEWS

Top Headlines

ಬಿಗ್​ಬಾಸ್ ನಾವು ಇನ್ಮೇಲೆ ಯಾವ ಗೇಮೂ ಆಡಲ್ಲ – ಕ್ಯಾಪ್ಟನ್ ವಿರುದ್ಧ ತಿರುಗಿ ಬಿದ್ದ ನರಕವಾಸಿಗಳು.. ಅಂಥದ್ದೇನಾಯ್ತು?

ಬಿಗ್​ಬಾಸ್ ಕನ್ನಡ ಸೀಸನ್ 11 ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಈ ಬಾರಿ 17 ಮಂದಿ ಕಂಟೆಸ್ಟೆಂಟ್ಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ಮೊದಲ ವಾರದಲ್ಲಿ ಯಮುನಾ

Live Cricket

Add Your Heading Text Here