ಗದಗ : ಕಾಣೆಯಾಗಿದ್ದ ಮಹಿಳೆ ಮೂರು ದಿನದ ಬಳಿಕ ನೀರಿಲ್ಲ ಬಾವಿಯಲ್ಲಿ ಜೀವಂತವಾಗಿ ಪತ್ತೆಯಾದ ವಿಚಿತ್ರ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ತೋಟಗುಂಟಿ ಗ್ರಾಮದಲ್ಲಿ ನಡೆದಿದೆ. ಘಟನೆ ಬಳಿಕ ತೋಟಗಂಟಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸದ್ಯ ಬಾವಿಯಲ್ಲಿ ಪತ್ತೆಯಾದ ಮಹಿಳೆಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ 6 ತಿಂಗಳ ಹಿಂದಷ್ಟೇ ಮಹಿಳೆಗೆ ಮುದುವೆಯಾಗಿತ್ತು. ಇನ್ನು ಘಟನಾ ಸಂಬಂಧ ಮಾಹಿತಿ ನೀಡಿದ ಮಹಿಳೆ, ಆಗಸ್ಟ್ 20 ರಂದು ನಸುಕಿನ ಜಾವ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿದ್ದೆ. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ಮಹಿಳೆ ಏಕಾಏಕಿ ಕುತ್ತಿಗೆ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದ್ದಾಳೆ. ಅಲ್ಲದೆ, ಕೈ ಬಳೆ, ಕಾಲುಂಗರ ನೀಡುವಂತೆ ಒತ್ತಾಯ ಮಾಡಿದ್ದಾಳೆ.
ನಂತರ ಕಣ್ಣು ಕಾಣದಂತೆ ಮರೆ ಮಾಡಿ ಕುತ್ತಿಗೆ ಹಿಡಿದು ಭಯಪಡಿಸಿದ್ದ ಮಹಿಳೆ, ನಂತರ ತಾಳಿ ಕೇಳಿ ನನ್ನನ್ನು ಬಾವಿಗೆ ತಳ್ಳಿದರು. ಬಾವಿಗೆ ಬಿದ್ದ ಮಾರನೆ ದಿನ ನನಗೆ ಪ್ರಜ್ಞೆ ಬಂದಿದೆ. ಆಗ ಕಿರುಚಿದರು ಸಹಾಯಕ್ಕೆ ಯಾರು ಬರಲಿಲ್ಲ. ಆಗಸ್ಟ್ 22ರಂದು ಧ್ವನಿ ಕೇಳಿದ ಜನರು ನನ್ನ ಕಾಪಾಡಿದ್ದಾರೆಂದು ಬಾವಿಯಲ್ಲಿ ಪತ್ತೆಯಾದ ಮಹಿಳೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಹುಚ್ಚಾಟ ಮೆರೆದ ದರ್ಶನ್ ಅಭಿಮಾನಿಗಳಿಗೆ ಪೊಲೀಸರ ಲಾಠಿಜಾರ್ಜ್..!
Post Views: 13