ಧೀರ್ಘಕಾಲದ ಗ್ಯಾಪ್ ನಂತರ ಹನುಮಾನ್ ಕುರಿತಾದ ಚಿತ್ರವೊಂದು ಸಿದ್ದಗೊಳ್ಳುತ್ತಿದೆ. ಹಾಗಂತ ಇದು ಭಕ್ತಿಪ್ರಧಾನ ಸಿನಿಮಾವಾಗಿರುವುದಿಲ್ಲ. ಕಳೆದವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಂಡು ಎಲ್ಲರ ಮನಸೆಳೆದ ’ಹನುಮಾನ್’ದಂತೆ ಇರುತ್ತದೆ. ಪ್ರಚಾರದ ಮೊದಲ ಹಂತವಾಗಿ ’ಗದಾಧಾರಿ ಹನುಮಾನ್’ ಹೆಸರಿನ ಪೋಸ್ಟರ್ ಬಿಡುಗಡೆಯಾಗಿದ್ದು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಸಿದ್ದಗೊಳ್ಳುತ್ತಿದೆ.
ವಿರಭ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಬಸವರಾಜ್ ಹುರಕಡ್ಲಿ ಮತ್ತು ರೇಣುಕ ಪ್ರಸಾದ್.ಕೆ.ಆರ್ ಜಂಟಿಯಾಗಿ ಬಂಡವಾಳ ಹೂಡುತ್ತಿರುವುದು ಹೊಸ ಅನುಭವ. ಈ ಪೈಕಿ ಬಸವರಾಜ್ ಹುರಕಡ್ಲಿ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಚನೆ, ನಿರ್ದೇಶನ ರೋಹಿತ್ ಕೊಲ್ಲಿ ಅವರದಾಗಿದೆ.
’ತಾರಕಾಸುರ’ ಖ್ಯಾತಿಯ ರವಿ ನಾಲ್ಕನೇ ಬಾರಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಹೊಸ ಪ್ರತಿಭೆ ಹರ್ಷಿತಾ ನಾಯಕಿ. ಉಳಿದಂತೆ ಕಲ್ಯಾಣ್ ಕೃಷ್ಣ, ರಮೇಶ್ ಪಂಡಿತ್, ಸುನಂದ ಕಲ್ಬುರ್ಗಿ, ನಾಗೇಶ್ ಮಯ್ಯ, ಶಿವಪ್ಪ, ಅರ್ಜುನ್ ಜೋಯಸ್, ಭೀಷ್ಮ, ಲೋಕೇಶ್ ನಟಿಸುತ್ತಿದ್ದಾರೆ.
ಸಂಗೀತ ಜ್ಯೂಡಾ ಸ್ಯಾಂಡಿ, ಛಾಯಾಗ್ರಹಣ ಅರುಣ್ ಗೌಡ, ಸಂಕಲನ ಸಿ.ಎನ್.ಕಿಶೋರ್, ಸಾಹಸ ಟೈಗರ್ ಶಿವ, ಕಲರಿಸ್ಟ್ ಚೇತನ್.ಎ.ಸಿ ನಿರ್ವಹಿಸುತ್ತಿದ್ದಾರೆ. ಬೆಂಗಳೂರು, ಚಿತ್ರದುರ್ಗ, ಗಂಗಾವತಿ, ಹಂಪಿ, ಅಂಜನಾದ್ರಿಬೆಟ್ಟ, ಕಿತ್ತೂರು, ಹೊನ್ನಾಪುರ್, ದಾಂಡೇಲಿ ಸುಂದರ ತಾಣಗಳಲ್ಲಿ ನಾಲ್ಕು ಹಂತಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಎರಡು ಹಂತದ ಶೂಟಿಂಗ್ ಮುಗಿದಿದ್ದು, ಸದ್ಯದಲ್ಲೆ ಬಾಕಿ ಭಾಗದ ದೃಶ್ಯಗಳನ್ನು ಸೆರೆಹಿಡಿಯಲು ತಂಡವು ಸಿದ್ದತೆ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ : ಶೂಟಿಂಗ್ ವೇಳೆ ಲೈಟ್ ಮ್ಯಾನ್ ಸಾವು – ಡೈರೆಕ್ಟರ್ ಯೋಗರಾಜ್ ಭಟ್ ವಿರುದ್ದ FIR ದಾಖಲು..!