ಬೆಂಗಳೂರು : ಟ್ರೇಡಿಂಗ್ ಹೆಸರಿನಲ್ಲಿ ಲಕ್ಷ-ಲಕ್ಷ ದೋಖಾ ಮಾಡ್ತಿದ್ದ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಂತೆ ಕಂತೆ ಹಣದ ವೀಡಿಯೋ ತೋರಿಸಿ ಬಿಲ್ಡಪ್ ಕೊಟ್ಟು ಲಕ್ಷದ ಆಸೆ ತೋರಿಸಿ ವಂಚಿಸುತ್ತಿದ್ದ ಕಿಶನ್ ಎಂಬ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ.
ವಂಚಕ ಪ್ರಾಫಿಟ್ ಕೊಡ್ತೀನಿ ಅಂಥ ಸಾಕಷ್ಟು ಜನರಿಗೆ ಮೋಸ ಮಾಡುತ್ತಿದ್ದ. ಗುಣನಿಧಿ ಎಂಬುವವರ ದೂರಿನ ಮೇರೆಗೆ ಇದೀಗ ಆರೋಪಿಯ ವಿರುದ್ಧ FIR ದಾಖಲಾಗಿದೆ. ಆರೋಪಿ 15 ಲಕ್ಷದ 15 ಸಾವಿರ ಹಣ ಹೂಡಿಕೆ ಮಾಡಿಸಿ ಮೋಸ ಮಾಡಿದ್ದಾನೆ. ಗುಣನಿಧಿಗೆ ಗೌತಮ್ ಎಂಬ ಸ್ನೇಹಿತನಿಂದ ಆರೋಪಿ ಕಿಶನ್ ಪರಿಚಯವಾಗಿದ್ದ, ನಂತರ ಕಿಶನ್ ಲೋನ್ಗಾಗಿ ವೆಂಕಟೇಶ್ನನ್ನ ಸಂಪರ್ಕ ಮಾಡುವಂತೆ ತಿಳಿಸಿದ್ದ.
ಬ್ರೋಕರ್ ವೆಂಕಟೇಶ್ನನ್ನು ದೂರುದಾರ ಸಂಪರ್ಕ ಮಾಡಿದ್ದು, ಎಲ್ಲಾ ದಾಖಲೆ ಪಡೆದು ಬ್ಯಾಂಕ್ನಿಂದ ಲೋನ್ ಮಂಜೂರಾಗಿದೆ. ಲೋನ್ ಅಮೌಂಟ್ RTGS ಮೂಲಕ ತನ್ನ ಅಕೌಂಟ್ಗೆ ವರ್ಗ ಮಾಡಿಕೊಂಡಿದ್ದ, ಲೋನ್ EMI ತಾನೇ ಪಾವತಿ ಮಾಡುವೆ ಎಂದು ಕಿಶನ್ ನಂಬಿಸಿದ್ದ. ಮೊದಲ ಐದಾರು ತಿಂಗಳ EMI ಪಾವತಿ ಮಾಡಿ ನಂಬಿಸ್ತಿದ್ದ. ಒಂದು ವರ್ಷಕ್ಕೆ ಲೋನ್ ಕ್ಲಿಯರ್ ಮಾಡಿ ಪ್ರಾಫಿಟ್ ಕೊಡ್ತೀವಿ ಅಂತಿದ್ದ.
ಹಣ ಕೇಳಿದ್ರೆ ಗನ್ ತೋರಿಸಿ ಕಿಶನ್ ಬೆದರಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಕಿಶನ್ ಪರಮೇಶ್ ಕಿಂಗ್ ರಿಯಲ್ ಎಸ್ಟೇಟ್ ಕಂಪನಿ ನಡೆಸ್ತಿದ್ದ. ಆರೋಪಿ ನೂರಾರು ಮಂದಿಗೆ ಇದೇ ರೀತಿ ವಂಚಿಸಿರೋ ಬಗ್ಗೆ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ವಂಚನೆಗೆ ಒಳಗಾದವರು ಜೀವ ಭಯದಿಂದ ದೂರು ಕೊಟ್ಟಿರಲಿಲ್ಲ.
ಇದನ್ನೂ ಓದಿ : ಬೆಂಗಳೂರು : ಮನೆ ಮಾಲಕಿಗೆ ಪ್ರಜ್ಞೆ ತಪ್ಪಿಸಿ ಕೋಟಿ ಕೋಟಿ ಲೂಟಿ ಮಾಡಿದ ಐನಾತಿ ದಂಪತಿ ಅರೆಸ್ಟ್..!