ಬೆಂಗಳೂರು : ಪೊಲೀಸ್ ಸೋಗಿನಲ್ಲಿ ವಿಡಿಯೋ ಕಾಲ್ ಮಾಡಿ ಟೆಕ್ಕಿಗೆ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೈಬರ್ ವಂಚಕರ ಪ್ಲಾನ್ಗೆ ಬೆಂಗಳೂರು ಟೆಕ್ಕಿ ಕಕ್ಕಾಬಿಕ್ಕಿಯಾಗಿದ್ದಾನೆ.
ನಾವು ಪೊಲೀಸರು ಅಂತ ನಂಬಿಸಿ ಟೆಕ್ಕಿ ಡಿಂಟೂ ಜೋಸೆಫ್ ಎಂಬುವವರಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ಕಾಲ್ನಲ್ಲಿ ವ್ಯಕ್ತಿ ಪೊಲೀಸ್ ಯೂನಿಫಾರ್ಮ್ನಲ್ಲಿದ್ದ, ಅಷ್ಟೇ ಅಲ್ಲದೆ ಪೊಲೀಸ್ ಠಾಣೆ ರೀತಿ ಬ್ಯಾಗ್ಗ್ರೌಂಡ್ ಕೂಡಾ ಇತ್ತು. ನಾವು ಮುಂಬೈನ ಜೂಹೂ ಠಾಣೆಯಿಂದ ಮಾತಾಡ್ತಿದ್ದೀವಿ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಡಿಟೇಲ್ ಕೊಡಿ ಎಂದು ಮಾಹಿತಿ ಸಂಗ್ರಹ ಮಾಡಿದ್ದಾನೆ.
ಎಷ್ಟು ಅಕೌಂಟ್ ಇವೆ, ಯಾವ ಖಾತೆಯಲ್ಲಿ ಎಷ್ಟು ಹಣ ಇದೆ, ಇದೆಲ್ಲಾ ಮಾಹಿತಿ ವಿಚಾರಣೆ ಮಾಡುತ್ತಿದ್ದ. ಇದರಿಂದ ಅನುಮಾನ ಬಂದು ಡಿಂಟೂ ಜೋಸೆಫ್ ಕಾಲ್ ಕಟ್ ಮಾಡಿದ್ದ. ಮತ್ತೆ ಕರೆ ಮಾಡಿದಾಗ ಡಿಂಟೂ ಜೋಸೆಫ್ ವಿಡಿಯೋ ರೆಕಾರ್ಡ್ ಮಾಡಿದ್ದ.
ಇದನ್ನೂ ಓದಿ : ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ – ಸುದೀಪ್ ಇಲ್ದೇ ರಿಲೀಸ್ ಆಯ್ತು ಬಿಗ್ ಬಾಸ್ನ ಹೊಸ ಪ್ರೋಮೋ ..!
Post Views: 144