Download Our App

Follow us

Home » ರಾಜಕೀಯ » ಉದ್ಯಮಿಗೆ ವಂಚನೆ : ರಾಜ್ಯ ಬಿಜೆಪಿ ST ಘಟಕದ ಉಪಾಧ್ಯಕ್ಷ ಆರ್.ಅನಿಲ್​​​ಕುಮಾರ್ ವಿರುದ್ದ FIR ದಾಖಲು..!

ಉದ್ಯಮಿಗೆ ವಂಚನೆ : ರಾಜ್ಯ ಬಿಜೆಪಿ ST ಘಟಕದ ಉಪಾಧ್ಯಕ್ಷ ಆರ್.ಅನಿಲ್​​​ಕುಮಾರ್ ವಿರುದ್ದ FIR ದಾಖಲು..!

ಬೆಂಗಳೂರು : ಗಣಿ ಕಂಪನಿಯಲ್ಲಿ ಪಾಲುದಾರಿಕೆ ಕೊಡಿಸೋದಾಗಿ ನಂಬಿಸಿ ವಂಚಿಸಿದ ಆರೋಪದ ಮೇಲೆ ರಾಜ್ಯ ಬಿಜೆಪಿ ST ಘಟಕದ ಉಪಾಧ್ಯಕ್ಷ ಆರ್.ಅನಿಲ್​​​ಕುಮಾರ್ ವಿರುದ್ದ FIR ದಾಖಲಾಗಿದೆ.

2023ರಲ್ಲಿ ಚಳ್ಳಕೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಅನಿಲ್​​​ಕುಮಾರ್, ಉದ್ಯಮಿ ಜಿ. ಶ್ರೀನಿವಾಸ ಮಿತ್ರ ಎಂಬವರ ಬಳಿ 6.40ಕೋಟಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಧ ಇದೀಗ ಅನಿಲ್​​​ಕುಮಾರ್ ಸೇರಿದಂತೆ ಉದ್ಯಮಿಗಳಾದ ಶ್ರೀನಿವಾಸರೆಡ್ಡಿ, ಡಿ.ಆರ್.ಇಂದಿರಾ, ಬಸವರಾಜು, ಶಶಿ ಎಂಬುವವರ ವಿರುದ್ದ CCB ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2023ರಲ್ಲಿ ಉದ್ಯಮಿ ಶ್ರೀನಿವಾಸ್​ಗೆ ಬಸವರಾಜು, ಶಶಿ ಮೂಲಕ ಅನಿಲ್​​​ಕುಮಾರ್​​​ ಪರಿಚಯವಾಗಿದ್ದರು. ತದನಂತರ ಹೊಳಲ್ಕೆರೆ ತಾಲೂಕಿನ 210 ಎಕರೆ ಪ್ರದೇಶದಲ್ಲಿರುವ ವಿಟು ಎ ಐರನ್ ಮೈನಿಂಗ್ ಲಿಮಿಟೆಡ್​ನಲ್ಲಿ ಹೂಡಿಕೆ ಮಾಡಿ ಎಂದು ಅನಿಲ್​​​ಕುಮಾರ್ ಉದ್ಯಮಿ ಶ್ರೀನಿವಾಸ್​ಗೆ ಪ್ರಚೋದಿಸಿದ್ದರು. 10 ಕೋಟಿ ಹೂಡಿಕೆ ಮಾಡಿದ್ರೆ ಶೇ.25ರಷ್ಟು ಮಾಲೀಕತ್ವ ಲಾಭದ ಆಮಿಷವೊಡ್ಡಿದ್ದರು.

ಅನಿಲ್​ಕುಮಾರ್ ಮಾತನ್ನ ನಂಬಿ​ ಹಂತ ಹಂತವಾಗಿ ಉದ್ಯಮಿ ಶ್ರೀನಿವಾಸ್​ ಮಿತ್ರ ಹಣ ಹೂಡಿದ್ದರು. 60ಲಕ್ಷ ನಗದು ರೂಪದಲ್ಲಿಯೂ ಹಣ ನೀಡಿದ್ದರು. ಆದಾದ ಬಳಿಕ ಅನಿಲ್​ ಟೀಂ ಉದ್ಯಮಿಗೆ ಮೈನಿಂಗ್ ಲೈಸೆನ್ಸ್ ನಂಬರ್ ನೀಡಿದ್ದರು. ಆದ್ರೆ ಅವರು ನೀಡಿದ ಸ್ಥಳದಲ್ಲಿ ಗಣಿಗಾರಿಕೆ ನಿಂತು ವರ್ಷಗಳೇ ಕಳೆದು ಹೋಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿತ್ತು. ವಿಷ್ಯ ಗೊತ್ತಾಗಿ ಹಣ ವಾಪಸ್ ನೀಡುವಂತೆ ಉದ್ಯಮಿ ಕೇಳಿದ್ದರು. ಈ ವೇಳೆ ಪ್ರಭಾವ ಬಳಸಿ ಸುಳ್ಳು ಕೇಸ್ ಹಾಕಿಸೋದಾಗಿ ಅನಿಲ್​​​ಕುಮಾರ್ ಟೀಂ ಬೆದರಿಸಿದ್ದಾರೆಂದು ಉದ್ಯಮಿ ಶ್ರೀನಿವಾಸ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡು CCB ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಗಿಫ್ಟ್ ​- ‘ಕಾವೇರಿ 5ನೇ ಹಂತ’ದ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ..!

Leave a Comment

DG Ad

RELATED LATEST NEWS

Top Headlines

‘ಅಯೋಗ್ಯ2’ಗೆ ಮುಹೂರ್ತ ಫಿಕ್ಸ್ – ಮತ್ತೆ ಒಂದಾದ ಸ್ಯಾಂಡಲ್​ವುಡ್​ ಸೂಪರ್ ಹಿಟ್​ ಜೋಡಿ ರಚಿತಾ​-ನಿನಾಸಂ ಸತೀಶ್..!

ಕನ್ನಡದ ಸೂಪರ್ ಹಿಟ್ ಜೋಡಿ ರಚಿತಾ ರಾಮ್ ಹಾಗೂ ಸತೀಶ್ ನಿನಾಸಂ ಮತ್ತೆ ಒಂದಾಗಿದ್ದಾರೆ. ಅಯೋಗ್ಯ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ, ಇದೀಗ 6

Live Cricket

Add Your Heading Text Here