ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ದರ್ಶನ್ ಹಾಗೂ ಮತ್ತವರ ಗ್ಯಾಂಗ್ ಕಂಬಿ ಹಿಂದೆ ಬಂಧಿಯಾಗಿದೆ. ಒಂದೇ ಕೇಸಲ್ಲಿ ಬರೋಬ್ಬರಿ 17 ಮಂದಿ ಆರೋಪಿಗಳು ಅರೆಸ್ಟ್ ಆಗುವ ಮೂಲಕ ಬೆಂಗಳೂರು ಅಂಡರ್ ವಲ್ಡ್ನಲ್ಲಿ D-ಗ್ಯಾಂಗ್ ದಾಖಲೆ ಬರೆದಿದೆ.
ಸಿಲಿಕಾನ್ ಸಿಟಿಯಲ್ಲಿ ದೊಡ್ಡ ದೊಡ್ಡ ರೌಡಿಗಳನ್ನು ಮರ್ಡರ್ ಮಾಡಲೂ 5 ರಿಂದ 6 ಮಂದಿ ಹೊಡೆದ ಹಿಸ್ಟರಿ ಇರಬಹುದು ಅಷ್ಟೇ. ಆದ್ರೆ ಒಬ್ಬ ಅಮಾಯಕನ ಕೊಲೆ ಮಾಡೋದ್ರಲ್ಲಿ 17 ಮಂದಿಯ ಗ್ಯಾಂಗ್ ಕೈಜೋಸಿದ್ದು, ಇದೇ ಮೊದಲು.
ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲವಾಗಿ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕಾಗಿ ಶುರುವಾದ ಅಪಹರಣ ಕೃತ್ಯವು ಕೊಲೆಯಲ್ಲಿ ಅಂತ್ಯವಾಗಿದೆ. ಅಪಹರಣ ಮಾಡುವುದರಿಂದ ಹಿಡಿದು ಕೊಲೆ ಮಾಡಿ ಶವ ಎಸೆಯುವ ತನಕ ಈ ಕೃತ್ಯದಲ್ಲಿ ಭಾಗಿ ಆಗಿದ್ದಾರೆ ಎನ್ನಲಾದ ಎಲ್ಲರೂ ಈಗ ಪೊಲೀಸರ ಅತಿಥಿ ಆಗಿದ್ದಾರೆ. ಪ್ರಮುಖ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ತನಿಖೆ ಚುರುಕುಗೊಂಡಿದ್ದು, ಇದರ ಜೊತೆಗೆ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ಆಗಬೇಕು ಎಂಬ ಒತ್ತಾಯವೂ ಜನರಿಂದ ಕೇಳಿಬರುತ್ತಿದೆ.
ಇದನ್ನೂ ಓದಿ : ರೇಣುಕಾಸ್ವಾಮಿ ಮ*ರ್ಡರ್ ಕೇಸ್ – ದರ್ಶನ್, ಪವಿತ್ರಾಗೌಡ ಸೇರಿ 14 ಮಂದಿಯ ಕ್ರೈಂ ರೆಕಾರ್ಡ್ ಓಪನ್..!