Download Our App

Follow us

Home » ಸಿನಿಮಾ » ‘ಒನ್ ಅಂಡ್ ಆ ಹಾಫ್’ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್ : ‘ಹೇ ನಿಧಿ’ ಎಂದು ಹಾಡಿದ ಶ್ರೇಯಶ್ ಸೂರಿ-ಮಾನ್ವಿತಾ ಹರೀಶ್..!

‘ಒನ್ ಅಂಡ್ ಆ ಹಾಫ್’ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್ : ‘ಹೇ ನಿಧಿ’ ಎಂದು ಹಾಡಿದ ಶ್ರೇಯಶ್ ಸೂರಿ-ಮಾನ್ವಿತಾ ಹರೀಶ್..!

‘ಒನ್ ಅಂಡ್ ಆ ಹಾಫ್’ ಸಿನಿಮಾ ಫಸ್ಟ್ ಲುಕ್ ಮೂಲಕವೇ ಪ್ರೇಕ್ಷಕರ ಗಮನಸೆಳೆದಿದ್ದು, ಈಗ ಈ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿ ಭಾರೀ ಸದ್ದು ಮಾಡುತ್ತಿದೆ. ಪ್ರಪಂಚದ ಅತಿ ದೊಡ್ಡ ಸೂಪರ್ ಸ್ಟಾರ್ ಗಾಡ್ ಗಣೇಶನಿಂದ ಹೇ ನಿಧಿ ಎಂಬ ಮೆಲೋಡಿ ಗೀತೆ ರಿಲೀಸ್ ಮಾಡಲಾಗಿದೆ. ಹೇ ನಿಧಿ ಅಂತಾ ನಾಯಕ ಶ್ರೇಯಶ್ ಸೂರಿ ಹಾಗೂ ಮಾನ್ವಿತಾ ಹರೀಶ್ ಹೆಜ್ಜೆ ಹಾಕಿದ್ದಾರೆ. ಶ್ರೇಯಶ್ ಸೂರಿ ಪದ ಪೊಣಿಸಿರುವ ಹಾಡಿಗೆ ಶ್ರೀರಾಜ್ ಧ್ವನಿಯಾಗಿದ್ದಾರೆ.

ಶ್ರೇಯಸ್ ಚಿಂಗಾ ಅಲ್ಲ ಶ್ರೇಯಶ್ ಸೂರಿ

ನವ-ಯುವ ಪ್ರತಿಭೆಗಳ ಜೊತೆ ಪ್ರತಿಭಾನ್ವಿತರು ಸೇರಿ ಮಾಡಿರುವ ‘ಒನ್ ಅಂಡ್ ಆ ಹಾಫ್ ‘ ಸಿನಿಮಾಕ್ಕೆ ರಂಗ್ಬಿರಂಗಿ, ಡೆವಿಡ್, ದಿ ವೆಕೆಂಟ್ ಹೌಸ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ಪ್ರತಿಭೆ ಶ್ರೇಯಶ್ ಸೂರಿ ಆಕ್ಷನ್ ಕಟ್‌ ಹೇಳಿದ್ದಾರೆ. ಇದರ ಜೊತೆಗೆ ತಾವೇ ನಾಯಕ ನಟನಾಗಿಯೂ ಅಭಿನಯಿಸುತ್ತಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಇಂಡಸ್ಟ್ರೀಯಲ್ಲಿ ಗುರುತಿಸಿಕೊಂಡಿರುವ ಅವರೀಗ ಶ್ರೇಯಸ್ ಚಿಂಗಾ ಬದಲಾಗಿ ಶ್ರೇಯಶ್ ಸೂರಿ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

ಶ್ರೇಯಶ್ ಸೂರಿ ನಾಯಕನಾಗಿದ್ದರೇ, ಮಾನ್ವಿತಾ ಹರೀಶ್ ಕಾಮತ್, ಸಾಧು ಕೋಕಿಲಾ, ಅವಿನಾಶ್ ಯೆಳಂದೂರ್, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಅನಂತು, ಸುಂದರಶ್ರೀ, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕುಮಾರ್, ಅಮಾನ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರಾಖಿ ಭೂತಪ್ಪ ತಾರಾಬಳಗದಲ್ಲಿದ್ದಾರೆ.

ಸಿನಿಮಾಗೆ ದೇವೇಂದ್ರ ಛಾಯಾಗ್ರಹಣ, ಮುಕೇಶ್ ಜೆ ಸಂಕಲನವಿದೆ. ಮಣಿಕಾಂತ್ ಕದ್ರಿ ಸಂಗೀತವಿರುವ ಹಾಡುಗಳಿಗೆ ಭಜರಂಗಿ ಮೋಹನ್ ನೃತ್ಯ ಸಂಯೋಜಿಸಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಕಥಾಹಂದರದ ಹೊಂದಿರುವ ಒನ್ ಅಂಡ್ ಆ ಹಾಫ್ ಸಿನಿಮಾವನ್ನು ಸುಲಕ್ಷ್ಮೀ ಫಿಲಂಸ್ ನಡಿ ಆರ್.ಚರಣ್, ಬಿ.ಇಂಪನಾ ಪ್ರಸಾದ್, ಅರ್ಪಿತ್ ನಾರಾಯಣ್, ಸಂತೋಷ್ ನಾಗೇನಹಳ್ಳಿ, ಕದ್ರಿ ಮಣಿಕಂಠ್ ನಿರ್ಮಾಣ ಮಾಡುತ್ತಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಒನ್ ಅಂಡ್ ಆ ಹಾಫ್ ಸಿನಿಮಾವನ್ನು ಆದಷ್ಟು ಬೇಗ ತೆರೆಗೆ ತರುವ ತಯಾರಿಯಲ್ಲಿದೆ.

ಹೇ ನಿಧಿ ಮೆಲೋಡಿ ಹಾಡಿನ ಮೂಲಕ ಆಮಂತ್ರಣ ಕೊಟ್ಟಿರುವ ಚಿತ್ರತಂಡ ಇದೇ ಸೆಪ್ಟೆಂಬರ್ 24ಕ್ಕೆ ನಾಯಕ ಶ್ರೇಯಶ್ ಸೂರಿ ಜನ್ಮದಿನದಂದು ಹೀರೋ ಇಂಟ್ರೂಡಕ್ಷನ್ ಹಾಡನ್ನು ಅನಾವರಣ ಮಾಡಲಿದೆ. ಎಂ.ಸಿ.ಬಿಜ್ಜು ಸಾಹಿತ್ಯ ರಚಿಸಿ ಈ ಹಾಡಿಗೆ ಧ್ವನಿಯಾಗಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ – ಸುಟ್ಟು ಕರಕಲಾದ ಕಾರು..!

Leave a Comment

DG Ad

RELATED LATEST NEWS

Top Headlines

BBK11: ‘ನಿಮ್ಮ ರೀತಿಯ ಫೂಟೇಜ್ ನನಗೆ ಬೇಡ’ – ಮೋಕ್ಷಿತಾ ಖಡಕ್​ ಮಾತಿಗೆ ಜಗದೀಶ್ ಪುಲ್​ ಸೈಲೆಂಟ್..!

ಬಿಗ್‌ ಬಾಸ್‌ ಮನೆ ಈಗ ರಣರಂಗವಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. 16 ಸ್ಪರ್ಧಿಗಳ ಮಧ್ಯೆ ಒಂಟಿ ಮನೆಯಲ್ಲಿ ಆಟ ಮುಂದುವರಿದಿದೆ. ಮೊದಲ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್

Live Cricket

Add Your Heading Text Here